ರಾಜ್ಯಕ್ಕೆ ರಾಹುಲ್: ಮುಹೂರ್ತ ಫಿಕ್ಸ್..!

28-12-2017 270
ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬರಲು ಮೂಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ನೇಮಕವಾದ ಮೇಲೆ ಮೊದಲ ಕಾರ್ಯಕ್ರಮ ಇದಾಗಿದ್ದು, ಜನವರಿ ಕೊನೆ ವಾರದಲ್ಲಿ ರಾಹುಲ್ ರಾಜ್ಯ ಪ್ರವಾಸ ಮಾಡಲಿದ್ದಾರೆ. ಜನವರಿ 21 ಅಥವಾ 26ರರೊಳಗೆ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು, ಬಹುತೇಕ ಚಿಕ್ಕಮಗಳೂರಿನಲ್ಲಿ ರಾಹುಲ್ ಗಾಂಧಿ ಅವರ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ. ಇಂದಿರಾಗಾಂಧಿ ಚುನಾವಣೆಗೆ ಸ್ಪರ್ಧಿಸಿದ ಕ್ಷೇತ್ರ ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಚಿಕ್ಕಮಗಳೂರಿನಲ್ಲಿ ಕಾರ್ಯಕ್ರಮ ಏರ್ಚಪಡಿಸಲಾಗುತ್ತಿದ್ದು, ರಾಹುಲ್ ಭೇಟಿ ವೇಳೆ ಬೃಹತ್ ರ್ಯಾಲಿ, ಸಮಾರಂಭ ಮಾಡಲು, ನಿರ್ಧಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಕರ್ನಾಟಕ ಹಾಗೂ ಮೈಸೂರು ಭಾಗದಲ್ಲಿ ರಾಹುಲ್ ಕಾರ್ಯಕ್ರಮ ನಡೆಯೊ ಬಗ್ಗೆ, ಕೆಪಿಸಿಸಿ ವತಿಯಿಂದ ಚರ್ಚೆ ನಡೆಯುತ್ತಿದ್ದು, ಮುಂದಿನ 10 ದಿನಗಳಲ್ಲಿ ರೂಪರೇಷ ಸಿದ್ಧವಾಗಲಿದೆ ಎಂದು ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ