ಬಾಗಲಕೋಟೆಯ ಜಮಖಂಡಿ ಬಂದ್

Bagalkot

28-12-2017

ಬಾಗಲಕೋಟೆ: ವಿಜಯಪುರದಲ್ಲಿ ನಡೆದ ಅಪ್ರಾಪ್ತೆ ಮೇಲೆ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಇಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬಂದ್ ಗೆ ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದು, ಜಮಖಂಡಿ ನಗರ ಸ್ತಬ್ಧವಾಗಿದೆ. ಬಸ್ ಸಂಚಾರ ಸಂಪುರ್ಣ ಸ್ಥಗಿತವಾಗಿದ್ದು, ಅಂಗಡಿಮುಂಗಟ್ಟು, ಹೋಟೆಲ್ ಗಳು ಸಹ ಬಂದ್ ಆಗಿವೆ. ವಿರಳ ಸಂಚಾರ, ಸಾರ್ವಜನಿಕರಿಲ್ಲದೇ, ಯಾವುದೇ ವಹಿವಾಟುಗಳು ನಡೆಯದೇ, ರಸ್ತೆಗಳು ಮತ್ತು ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಅಲ್ಲದೇ ಜಮಖಂಡಿ ನಗರದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕಾಮುಕರಿಗೆ ಉಗ್ರ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape nad murder protest ಅಪ್ರಾಪ್ತೆ ದಲಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ