ದಿಡ್ಡಳ್ಳಿ ನಿರಾಶ್ರಿತರ ಶಿಬಿರಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭೇಟಿ

Kannada News

15-04-2017

ಕೊಡಗಿನ ದಿಡ್ಡಳ್ಳಿ ನಿರಾಶ್ರಿತರ ಶಿಬಿರಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭೇಟಿ. ಆದಿವಾಸಿಗಳ‌ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ತಮ್ಮ ಸಂಕಷ್ಟ ಬಿಚ್ಚಿಟ್ಟ ಆದಿವಾಸಿ ಜನರು. ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಗೋಡು ತಿಮ್ಮಪ್ಪ.                        
ಕಾಗೋಡು ತಿಮ್ಮಪ್ಪ ಜೊತೆ ಎಂಎಲ್ ಸಿ ವೀಣಾ ಅಚ್ಚಯ್ಯ, ಅರಣ್ಯ ನಿಗಮ‌ ಮಂಡಳಿ ಪದ್ಮಿನಿ ಪೊನ್ನಪ್ಪ ಸಾಥ್. ಆದಿವಾಸಿ ಮುಖಂಡರಾದ ಜೆಕೆ ಮುತ್ತಮ್ಮ, ಜೆಕೆ ಅಪ್ಪಾಜಿಯಿಂದ ವಸ್ತುಸ್ಥಿತಿ ವಿವರಣೆ. ಐಟಿಡಿಪಿ ಇಲಾಖೆಯಲ್ಲಿ ಕೋಟ್ಯಂತರ ರೂ. ಹಣವಿದ್ದರೂ ವಿನಿಯೋಗಿಸದ ಅಧಿಕಾರಿಗಳು.  ದಿಡ್ಡಳ್ಳಿಯಲ್ಲಿ ಕಂದಾಯ ಸಚಿವ‌ ಕಾಗೋಡು ತಿಮ್ಮಪ್ಪ ಹೇಳಿಕೆ. ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸಲಾಗುವುದು. ಮನೆಯೊಂದಿಗೆ ಜಾಗವನ್ನೂ ನೀಡುವ ಬಗ್ಗೆ ಚಿಂತನೆ.                        
ದಿಡ್ಡಳ್ಳಿ ಯಲ್ಲೇ ನಿವೇಶನ ನೀಡುವ ಬಗ್ಗೆ ಖಚಿತವಾಗಿ ಹೇಳದ ಕಾಗೋಡು ತಿಮ್ಮಪ್ಪ. ಅಡ್ಡ ಗೋಡೆ ಮೇಲೆ‌ದೀಪವಿಟ್ಟಂತೆ ಮಾತನಾಡಿದ‌ ಕಂದಾಯ ಸಚಿವ. ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದ ಕಾಗೋಡು ತಿಮ್ಮಪ್ಪ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ