ಅತ್ಯಾಚಾರ: ಆರೋಪಿಯೊಬ್ಬನ ಬಂಧನ

Rape case: one arrested

28-12-2017

ಮಂಡ್ಯ: ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ನವೆಂಬರ್ 29ರಂದು ನಡೆದ ಅತ್ಯಾಚರ ಪ್ರಕರಣದ ಆರೋಪಿಯನ್ನು ಮಂಡ್ಯದ ಪಾಂಡವಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದ ಸೋಮನಹಳ್ಳಿಯ ದಲಿತ ಯುವತಿ ಮೇಲೆ, ಶಿವಕುಮಾರ್ ಎಂಬಾತ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ. ಘಟನೆ ಕುರಿತು ಯುವತಿ ಮತ್ತವರ ಪೋಷಕರು ಪಾಂಡವಪುರ ಪೊಲೀಸ್ ಠಾಣೆಯಲ್ಲಿಸ ದೂರು ದಾಖಲಿಸಿದ್ದರು. ಘಟನೆಯ ತನಿಖೆ ಕೈಗೊಂಡ ಪೊಲೀಸರು, ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿ ಮೇರೆಗೆ ಆರೋಪಿ ಶಿವಕುಮಾರ್ ನನ್ನು ಬಂಧಿಸಿದ್ದಾರೆ. ಈತ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿಯವನೆಂದು ತಿಳಿದು ಬಂದಿದೆ. ಅಲ್ಲದೇ ಬಂಧಿತನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape Arrest ಪಾಂಡವಪುರ ನ್ಯಾಯಾಂಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ