ರಾಸಲೀಲೆ ಕೇಸ್: 20ದಿನ ನಂತರ ಸ್ವಾಮೀಜಿ ಪ್ರತ್ಯಕ್ಷ

kottureshwara swmiji in mutt after 20 days

27-12-2017

ಕೊಪ್ಪಳ: ರಾಸಲೀಲೆ ದೃಶ್ಯಾವಳಿ ಬಹಿರಂಗಗೊಂಡ ನಂತರ ನಾಪತ್ತೆಯಾಗಿದ್ದ ಕಲ್ಮಠದ ಶ್ರೀ ಕೊಟ್ಟೂರು ಸ್ವಾಮೀಜಿ(ಗದ್ದುಗೆಪ್ಪ) ಇಂದು ಬೆಳಗ್ಗೆ ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಎಂದಿನಂತೆ ಪತ್ರಯ್ಯ ತಾತನ ಕತೃ ಗದ್ದುಗೆಗೆ ಪೂಜೆ ಸಲ್ಲಿಸಿದ ಅವರು, ಬಳಿಕ ಶಿಷ್ಯ ವೃಂದ, ಮಠದ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದರು. ಸ್ವಾಮೀಜಿ ಕಳೆದ 20 ದಿನಗಳಿಂದ ಮಠದಲ್ಲಿ ನಡೆದ ಬೆಳವಣಿಗೆ, ಯಾವ ಮುಖಂಡರು ಏನೆಲ್ಲಾ ಷಡ್ಯಂತ್ರ ರೂಪಿಸಿದ್ದಾರೆ ಎಂಬ ಅಂಶಗಳನ್ನು ಆಪ್ತರಿಂದ ತಿಳಿದುಕೊಂಡರು.

ತಮ್ಮ ಮೇಲೆ ದಾಖಲಾಗಿರುವ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮದೇ ಸಂಸ್ಥೆಯ ಅಧೀನದಲ್ಲಿರುವ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸದಸ್ಯರಾಗಿರುವ ಇಬ್ಬರು ವಕೀಲರ ಮೂಲಕ ಕಾನೂನು ಚೌಕಟ್ಟಿನಲ್ಲಿ ಪ್ರತ್ಯುತ್ತರ ನೀಡುವ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Kottureshwara sex scandle ಸ್ವಾಮೀಜಿ ವಿದ್ಯಾವರ್ಧಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ