ಮಹಿಳೆ ಅನುಮಾನಾಸ್ಪದ ಸಾವು

Woman suspicious death in Hassan

27-12-2017 241

ಹಾಸನ: ಚನ್ನರಾಯಪಟ್ಟಣದಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತಪಟ್ಟವರನ್ನು ಚನ್ನರಾಯಪಟ್ಟಣದ ಅಮೃತಾ(22)ಎಂದು ಗುರುತಿಸಲಾಗಿದೆ. ಮಂಡ್ಯ ಮೂಲದ ಅಮೃತಾರನ್ನ 6 ವರ್ಷಗಳ ಹಿಂದೆ ಚನ್ನರಾಯಪಟ್ಟಣದ ಪ್ರವೀಣ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಪ್ರವೀಣ್ ಮತ್ತು ಆತನ ಮನೆಯವರು ಮೊದಲಿಂದಲೂ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದರು ಎಂದು ಅಮೃತಾ ಪೋಷಕರು ಮತ್ತು ಸಂಬಂಧಿಕರು ಆರೋಪಿಸುತ್ತಿದ್ದಾರೆ.

ಮನೆಯಿಂದ 5 ಲಕ್ಷ ರೂಪಾಯಿ ತರುವಂತೆ ಕಳೆದ ಕೆಲ ತಿಂಗಳಿನಿಂದ ಅಮೃತಾಗೆ ಬೆದರಿಕೆ ಹಾಕಿದ್ದರು. ಇದು ಆತ್ಮಹತ್ಯೆಯಲ್ಲ, ಬದಲಾಗಿ ವ್ಯವಸ್ಥಿತ ಕೊಲೆ. ಅಮೃತಾಳನ್ನ ಕೊಲೆ ಮಾಡಿ ನೇಣು ಬಿಗಿದಿದ್ದಾರೆ. ಮಂಡಿಯೂರಿ ನೇಣು ಹಾಕಿಕೊಂಡಿರುವುದನ್ನ ನೋಡಿದರೆ ಮೇಲ್ನೋಟಕ್ಕೆ ಇದು ಕೊಲೆ ಎಂದು ಕಂಡುಬಂದಿದ್ದು ಅಮೃತಾ ಪತಿ ಪ್ರವೀಣ್ ಹಾಗೂ ಆತನ ಮನೆಯವರನ್ನ ಬಂಧಿಸಿ ನ್ಯಾಯ ಕೊಡಿಸಿ ಅಮೃತಾ ತಾಯಿ ಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಮೃತ ಅಮೃತಾ ಪತಿ ಪ್ರವೀಣ್, ಅತ್ತೆ ಕಮಲಬಾಯಿ, ಸುನೀತಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ