ಅನಂತಕುಮಾರ್ ಹೆಗಡೆಗೆ ಸಿಎಂ ಪರೋಕ್ಷ ತಿರುಗೇಟು

CM siddaramaiah Criticise  Ananth Kumar Hegde

27-12-2017 247

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದು, ತಮ್ಮ ಪ್ರೀತಿಯ ಶಿಷ್ಯ ಸಚಿವ ಆಂಜನೇಯರನ್ನು ಹಾಡಿ ಹೊಗಳಿದರು. ಆಂಜನೇಯ ವಿಶೇಷ ವ್ಯಕ್ತಿ, ಸಾಮೂಹಿಕ ಮದುವೆ ಮಾಡುವುದರ ಮೂಲಕ ಬಡಜನರಿಗೆ ನೆರವಾಗುವ, ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕುವೆಂಪು ಅವರನ್ನು ಸಿದ್ದರಾಮಯ್ಯ ನೆನಪು ಮಾಡಿಕೊಂಡು, ಕುವೆಂಪು ಅವರು ಹೇಳುತ್ತಿದ್ದರು, ಹುಟ್ಟುವಾಗ ನಾವು ವಿಶ್ವ ಮಾನವರು, ಬೆಳೆಯುವಾಗ ಅಲ್ಪ ಮನುಷ್ಯರಾಗುತ್ತಾರೆ ಎಂದು, ಆದರೆ ನಾವು ವಿಶ್ವಮಾನವರಾಗೋ ದಿಕ್ಕಿನಲ್ಲಿ ಸಾಗೋಣ ಎಂದರು. ಕೆಲವರು ಇತ್ತೀಚಿಗೆ ಧರ್ಮ, ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ, ಯಾವುದೇ ಧರ್ಮ ಇನ್ನೊಂದು ಧರ್ಮದ ವಿರುದ್ಧ ದ್ವೇಷ ಎತ್ತಿಕಟ್ಟುವುದಿಲ್ಲ, ನಮಗೆ ಪರಧರ್ಮ ಸಹಿಷ್ಣುತೆ ಇರಬೇಕು ಎಂದು, ಪರೋಕ್ಷವಾಗಿ ಅನಂತ್ ಕುಮಾರ್ ಹೆಗಡೆಗೆ ತಿರುಗೇಟು ನೀಡಿದರು. ರಾಜಕೀಯದಲ್ಲಿ ರಾಜಕಾರಣಿಗಳು ಪ್ರಜಾಪ್ರಭುತ್ವದ ಪರಿಭಾಷೆಯನ್ನು ಬಳಸಬೇಕು ಎಂದು ಕಿವಿಮಾತು ಹೇಳಿದ್ದಾರೆ.ಸಂಬಂಧಿತ ಟ್ಯಾಗ್ಗಳು

siddaramaiah H.Anjaneya ಸಹಿಷ್ಣುತೆ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ