ಬಿಎಸ್ ವೈ-ಸಿದ್ದು ಪ್ರತಿಕೃತಿ ದಹಿಸಿ ಪ್ರತಿಭಟನೆ

Replica of siddu and BSY burnt and protest

27-12-2017

ಹಾವೇರಿ: ಉತ್ತರ ಕರ್ನಾಟಕ‌ ಹೆಬ್ಬಾಗಿಲು ಹಾವೇರಿಯಲ್ಲೂ ಕಳಸಾ ಬಂಡೂರಿ ಪ್ರತಿಭಟನೆಯ ಕಿಚ್ಚು  ಜೋರಾಗಿದೆ. ಹಾವೇರಿಯ ಹೊಸಮನಿ‌ ಸಿದ್ದಪ್ಪ ವೃತ್ತದಲ್ಲಿ ಕೆಜೆಪಿ ವತಿಯಿಂದ ವಿಶೇಷ ಪ್ರತಿಭಟನೆ ನಡೆಸಿದ್ದು, ಯಡಿಯೂರಪ್ಪ ಹಾಗು ಸಿಎಂ ಸಿದ್ದರಾಮಯ್ಯ ಅವರ ಅಣುಕು ಶವಯಾತ್ರೆ ಮಾಡಿ ಪ್ರತಿಭಟಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೆಸಾರ್ಟ್ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣವೇ ಕಳಸಬಂಡೂರಿ‌ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅದಲ್ಲದೇ ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mahadayi KJP ರೆಸಾರ್ಟ್ ಪ್ರತಿಕೃತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ