‘ನೀರಿನ ವಿಷಯಕ್ಕೆ ಬಿಜೆಪಿ ವಿಷ ಬೆರೆಸುತ್ತಿದೆ’

Tanveer sait allegation against BJP

27-12-2017 245

ಕಲಬುರಗಿ: ಕುಡಿಯುವ ನೀರಿನ ವಿಷಯದಲ್ಲಿ ಬಿಜೆಪಿ ವಿಷ ಬೆರೆಸುವ ಕೆಲಸ ಮಾಡುತ್ತಿದೆ ಎಂದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಮಹದಾಯಿ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದರು. ಬಿಜೆಪಿ ಪರಿವರ್ತನಾ ಯಾತ್ರೆ ಮಾಡುತ್ತಿರುವ ಯಡಿಯೂರಪ್ಪ ಮಹದಾಯಿ ವಿಷಯದಲ್ಲಿಯೂ ಪರಿವರ್ತನೆ ಮಾಡಿದ್ದಾರೆ, ಮಹದಾಯಿ ವಿವಾದವನ್ನು ಮತ್ತೆ ಎಬ್ಬಿಸಿದ್ದಾರೆ, ಗೋವಾ ಸಿಎಂ ಪತ್ರ ತರಿಸಿ ಗೊಂದಲ ಮೂಡಿಸಿದ್ದಾರೆ ಎಂದು ಟೀಕಿಸಿದರು. 

ರಾಜ್ಯದ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ವಿವಾದ ಬಗೆಹರಿಸುವ ಕೆಲಸ ಮಾಡುತ್ತಿದ್ದರು, ರಾಜಕೀಯ ವಿಷ ಬೀಜ ಬಿತ್ತಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

Tanveer Sait Mahadayi dispute ರಾಜ್ಯಾಧ್ಯಕ್ಷ ವಿವಾದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ