ಅನಂತಕುಮಾರ್ ಹೆಗಡೆಗೆ ಎಚ್ಚರಿಕೆ..!

Dalith organisations: warns ananth kumar hegde

27-12-2017

ಉತ್ತರ ಕನ್ನಡ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಕುರಿತ ಹೇಳಿಕೆಗೆ, ಶಿರಸಿಯ ದಲಿತಪರ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ. ಈ ವೇಳೆ ಮಾತನಾಡಿದ ದಲಿತ ಮುಖಂಡರು, ಅನಂತಕುಮಾರ್ ಸಂವಿಧಾನ ವಿರೋಧ ಹೇಳಿಕೆ ಕೊಡೋದು ಹೆಚ್ಚಾಗ್ತಿದೆ, ಧರ್ಮ ಧರ್ಮದ ರಕ್ತದ ಪರಿಚಯಿಸೋದು ಅನಿಷ್ಟ ಪದ್ಧತಿ, ಅನಂತಕುಮಾರ್ ಹೆಗಡೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ದೇಶದ್ರೋಹಿ ಸ್ಥಾನದಲ್ಲಿ ನಿಲ್ಲುವಂತ ಹೇಳಿಕೆಯನ್ನು ಅವರು ಕೊಡುತ್ತಿದ್ದಾರೆ, ಸರ್ಕಾರದವರೂ ಈ ಬಗ್ಗೆ ಟೀಕೆ, ಟಿಪ್ಪಣಿ ಕೊಡುತ್ತಿರುವುದು ವಿಷಾಧನೀಯ, ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸಚಿವ ಸ್ಥಾನಕ್ಕೆ ರಾಜೀನಾಮೆ, ರಾಜಕೀಯದಿಂದ ದೂರ ಉಳಿದು ಬೇಕಾದರೆ ತಮ್ಮ ನಿಲುವುಗಳನ್ನು ಪ್ರಚಾರ ಮಾಡಲಿ, ಇನ್ನೆರಡು ದಿನದೊಳಗೆ ಕ್ಷಮೆ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Anant Kumar Hegde Constitution ದೇಶದ್ರೋಹಿ ರಾಜೀನಾಮೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ