ತನ್ವೀರ್ ಸೇಠ್ ಗೆ ಬೆದರಿಕೆ ಆರೋಪ ಹಿನ್ನೆಲೆ ಅಧ್ಯಕ್ಷ ಶಾಂತರಾಜು ಹೇಳಿಕೆ

Kannada News

15-04-2017

ಮೈಸೂರು: ಕಳೆದ 11ರಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ರನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ತೆರಳಿದ್ದ ವೇಳೆ ತಾನು ತನ್ವೀರ್ ಸೇಠ್ ಗೆ ಬೆದರಿಕೆ ಹಾಕಿರುವುದಾಗಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ದಲಿತ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷ ಶಾಂತರಾಜು ಮೈಸೂರಿನಲ್ಲಿ ಹೇಳಿಕೆ.
ಸಚಿವ ತನ್ವೀರ್ ಸೇಠ್ ರನ್ನು ಭೇಟಿ ಮಾಡಿದ ವೇಳೆ ಅವರು ಸೌಜನ್ಯದಿಂದ ನಡೆದುಕೊಳ್ಳಲಿಲ್ಲ. ದಲಿತ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಕೊಡಲು ತನ್ವೀರ್ ಸೇಠ್ ರನ್ನು ಭೇಟಿ ಮಾಡಲಾಗಿತ್ತು. ಆ ವೇಳೆ ತನ್ವೀರ್ ಸೇಠ್ ನನ್ನ ವಿರುದ್ಧ ಏಕ ವಚನದಿಂದ ಮಾತನಾಡಿದರು. ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು.
ಬಳಸಬಾರದ ಪದಗಳನ್ನು ತನ್ವೀರ್ ಸೇಠ್ ಬಳಸಿದರು. ಅಲ್ಲಿರುವ ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ.
ಅಂದು ನಾನು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಆದರೆ ಆನ್ ಲೈನ್ ಮೂಲಕ ಸಚಿವರ ಕಡೆಯಿಂದ ಬಂದ ದೂರನ್ನು ಸ್ವೀಕರಿಸಿ ತನ್ನನ್ನು ಸೇರಿದಂತೆ ಇತರರನ್ನು ಪೋಲೀಸರು ಬಂಧಿಸಿದರು. ಈ ಮೂಲಕ ಸಚಿವ ತನ್ವೀರ್ ಸೇಠ್ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಏಪ್ರಿಲ್ 29 ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಹೇಳಿದ ಶಾಂತರಾಜು ಸಚಿವ ತನ್ವೀರ್ ಸೇಠ್ ರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಸಚಿವ ತನ್ವೀರ್ ಸೇಠ್ ವಿರುದ್ಧ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ