‘ನಾನು ಹಿಂದೂ ಆದ್ರೆ ಹಿಂದುತ್ವವಾದಿಯಲ್ಲ’-ಸಿಎಂ27-12-2017 252

ಚಿತ್ರದುರ್ಗ: ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ, ಮಹಾದಾಯಿ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು, ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಿತ್ರದುರ್ಗಕ್ಕೆ ಹೆಲಿಪ್ಯಾಡ್ ಮೂಲಕ ಬಂದ ಅವರು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಆರ್.ಎಸ್.ಎಸ್ ನವರು ಕೋಮುವಾದಿಗಳು. ಆರ್.ಎಸ್.ಎಸ್ ಕಂಡರೆ ನಮಗೆ ಭಯ ಇಲ್ಲ. ಅವರು ಬೆಂಕಿ ಹಚ್ಚುತ್ತಾರೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಆರ್.ಎಸ್.ಎಸ್ ಬಗ್ಗೆ ಎಚ್ಚರವಿರಲಿ ಎಂದು ಕಿವಿಮಾತು ಹೇಳಿದ್ದೇನೆ ಎಂದು ತಿಳಿಸಿದರು.

ಮಹದಾಯಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಅನಗತ್ಯವಾಗಿ ರಾಜಕೀಯ ನಾಟಕ ಮಾಡುತ್ತಿದೆ, ಜನರನ್ನು ಮೋಸ ಮಾಡುತ್ತಿದೆ, ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಯಡಿಯೂರಪ್ಪ ಮಹದಾಯಿ ವಿಚಾರದಲ್ಲಿ ಮಾತು ತಪ್ಪಿದ್ದಾರೆ, ಹಾಗಾಗಿ ಇಂದು ಉತ್ತರ ಕರ್ನಾಟಕ ಬಂದ್ ಮಾಡಿದ್ದಾರೆ ಎಂದರು. ಇನ್ನು ಅನಂತ್ ಕುಮಾರ್ ಹೆಗಡೆ ಒಬ್ಬ ಯಕಶ್ಚಿತ್ ರಾಜಕಾರಣಿ. ನಾನು ಹಿಂದೂ, ಆದ್ರೆ ಹಿಂದುತ್ವವಾದಿಯಲ್ಲ. ನಾನು  ಜಾತ್ಯಾತೀತ ತತ್ವಕ್ಕೆ ಬದ್ದನಾಗಿರುವವನು ಎಂದರು.

ಸದಾಶಿವ ಆಯೋಗದ ವರದಿ ಬಗ್ಗೆ ಚರ್ಚೆ ಮಾಡಲು ಜನವರಿ 13 ರಂದು ಸಭೆ ಕರೆಯುತ್ತೇವೆ ಎಂದು ಮಾಹಿತಿ ನೀಡಿದ ಸಿಎಂ, ಜಾತಿಗಣತಿ ಸಮೀಕ್ಷೆಯನ್ನು ಆಯೋಗ ವರದಿ ನೀಡಿದ ತಕ್ಷಣ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.ಸಂಬಂಧಿತ ಟ್ಯಾಗ್ಗಳು

Siddaramaiah sadashiva committ ಜಾತಿಗಣತಿ ಸಮೀಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ