ಮಹದಾಯಿ ನೀರಿಗಾಗಿ ಹೋಮ-ಹವನ

Homa-havana for Mahdayai water

27-12-2017

ಹುಬ್ಬಳ್ಳಿ: ಮಹದಾಯಿ ನೀರಿಗಾಗಿ ಉತ್ತರಕರ್ನಾಟಕ ಬಂದ್ ಹಿನ್ನೆಲೆ, ಹೋಮ-ಹವನದ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಯುವಸೇನೆ, ಹುಬ್ಬಳ್ಳಿ ನಗರದ ಸಂಗೊಳ್ಳಿ ರಾಯಣ್ಣ‌ ವೃತ್ತದಲ್ಲಿ ಈ ರೀತಿಯ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಅಗ್ನಿಕುಂಡ ಮಾಡಿ ಎಲ್ಲ ದವಸ ಧಾನ್ಯಗಳನ್ನು ಹಾಕಿ ಮಂತ್ರ ಪಠಿಸಿದ 100ಕ್ಕೂ ಹೆಚ್ಚು ಮಂದಿ ಕರ್ನಾಟಕ ಯುವಸೇನೆ ಕಾರ್ಯಕರ್ತರು ಹೋಮ-ಹವನದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಾಜಕಾರಣಿಗಳಿಗೆ ಬುದ್ಧಿ ಕಲಿಸು ಅಂತ ದೇವರ ಮೊರೆ ಹೊಗಿದ್ದು, ಹುಸಿ ಭರವಸೆ ನೀಡಿದ ನಾಯಕರ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದ್ದಾರೆ. ಹಾಗೆಯೇ ಆದಷ್ಟು ಬೇಗ ಮಹದಾಯಿ ವಿವಾದ ಪರಿಹರಿಸುವಂತೆ ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mahadayi uttara Karnataka ಹೋಮ-ಹವನ ಧಿಕ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ