ತಲ್ಲಣಗೊಳಿಸಿದ್ದ ಪ್ರಕರಣ: ಆರೋಪಿಗಳು ಖುಲಾಸೆ

court judgement in ilavala bus robbery

26-12-2017

ಮೈಸೂರು: ಮೈಸೂರಿನ ಇಲವಾಲ ಬಸ್​ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಲ್ಲಾ ಆರೋಪಿಗಳನ್ನು ಮೈಸೂರು ನ್ಯಾಯಾಲಯ ಖುಲಾಸೆಗೊಳಿಸಿದೆ.  2014ರಲ್ಲಿ ತಲ್ಲಣಗೊಳಿಸಿದ್ದ ದರೋಡೆ ಪ್ರಕರ ಇದಾಗಿದ್ದು, ಪೊಲೀಸರೇ ದರೋಡೆ ಮಾಡಿದ್ದರೆಂಬ ಆರೋಪವಿತ್ತು. ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಆರೋಪ ಹೊತ್ತಿದ್ದ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.

ಉಪ ಪೊಲೀಸ್ ನಿರೀಕ್ಷಕ ಜಗದೀಶ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಸತೀಶ್, ಲತೀಫ್, ಅಶೋಕ್, ರವಿ, ಮನೋಹರ್, ಐ.ಜಿ.ಪಿ.ಗನ್ ಮ್ಯಾನ್ ಪ್ರಕಾಶ್, ಬಾತ್ಮೀದಾರರಾದ ಸಲೀಂ, ಶರೀಫ್ ಆರೋಪದಿಂದ ಮುಕ್ತರಾಗಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಐಡಿ ನಡೆಸಿತ್ತು. 2014ರ ಜುಲೈ 29ರಂದು ಬೆಂಗಳೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಬಸ್​ನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆ, ಇಲವಾಲ ಬಳಿ ಬಸ್ ತಡೆದ ಪೊಲೀಸರು ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ 20 ಲಕ್ಷ ಹಣ ಇದ್ದ ಬಗ್ಗೆ ಪೊಲೀಸರಿಂದ ಪ್ರಕರಣ ದಾಖಲಾಗಿತ್ತು. ಆದರೆ ಮರು ದಿನ ಬಸ್​ನಲ್ಲಿದ್ದ ಎರಡೂವರೆ ಕೋಟಿ ಕಾಣೆಯಾಗಿದೆ ಎಂದು ಕೇರಳ ಮೂಲದ ಸೈನುಲಬ್ಬೀನ್​ ಎಂಬಾತ ದೂರು ನೀಡಿದ್ದನು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಸಿಐಡಿ ತನಿಖೆಗೆ ಒಪ್ಪಿಸಿತ್ತು.

ಹಣವನ್ನು ಪೊಲೀಸರೇ ದರೋಡೆ ಮಾಡಿದ್ದಾರೆಂದು ಎಎಸ್​ಐ ಸೇರಿ 7 ಮಂದಿ ಪೊಲೀಸರ ಬಂಧನವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​, ಪೊಲೀಸರೇ ದರೋಡೆ ಮಾಡಿದ್ದಕ್ಕೆ ಸಾಕ್ಷ್ಯ ಸಾಬೀತು ಮಾಡುವಲ್ಲಿ ಸಿಐಡಿ ವಿಫಲವಾಗಿದ್ದು, ಬಸ್​ನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಕೇರಳದ ಸೈನುಲಬ್ಬೀನ್​, ಸೈನುದ್ದೀನ್​ ಮತ್ತು ಸಾಲಿಕೋಯಾತಂಗಳ್​ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್​ ಆದೇಶಿಸಿದೆ.


ಸಂಬಂಧಿತ ಟ್ಯಾಗ್ಗಳು

robbery case Police officer ನ್ಯಾಯಾಲಯ ದರೋಡೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ