ಸಾಧನಾ ಸಮಾವೇಶದಲ್ಲಿ ಸಿಎಂ ಭಾಷಣ

Cm siddaramaiah speech in davangere

26-12-2017

ದಾವಣಗೆರೆ: ದಾವಣಗೆರೆಯ ಹರಪ್ಪನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿದ ಅವರು, ಎಂಪಿ ಪ್ರಕಾಶ್ ಹಾಗೂ‌ ನಾನು ಒಟ್ಟಿಗೆ ಕೆಲಸ ಮಾಡಿದವರು. ಅವರು ಸರಳ, ಸಜ್ಜನಿಕೆ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ಎಂಪಿ ಪ್ರಕಾಶ್ ಅವರನ್ನು ನೆನಪಿಸಿಕೊಂಡರು. ಅಲ್ಲದೇ ಹರಪ್ಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂಪಿ ರವೀಂದ್ರ ಚುನಾವಣಾ ನಿವೃತ್ತಿ ಬಗ್ಗೆ ಬಹಿರಂಗ ಹೇಳಿಕೆ ನೀಡಿದ ಸಿಎಂ, ರಾಜಕೀಯ ಕುಟುಂಬದಿಂದ ಬಂದಿರುವ ವ್ಯಕ್ತಿ ನಿವಾಗಿದ್ದು. ಲಕ್ಷಾಂತರ ಜನರು ನಿಮ್ಮನ್ನು ನಂಬಿದ್ದಾರೆ, ಹೆದರಿ ಪಲಾಯನ ಮಾಡಬೇಡಿ ಎಂದು ತಿಳಿಹೇಳಿದ ಸಿಎಂ ಸಿದ್ದರಾಮಯ್ಯ, ಎಂಪಿ ರವೀಂದ್ರರವರಿಗೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತೆ, ಅವರು ಚುನಾವಣಾ ರಾಜಕೀಯದಲ್ಲಿ ಮುಂದುವರಿಯುತ್ತಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

Siddaramaiah MP prakash ಎಂಪಿ ರವೀಂದ್ರ ಆಶೀರ್ವಾದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ