ಬೈಕ್ ವೇಗಕ್ಕೆ ಹಾರಿತು ಯುವಕನ ಪ್ರಾಣ

Speed bike rider died on flyover

26-12-2017

ಬೆಂಗಳೂರು: ಆಡುಗೋಡಿಯ ಸೆಂಟ್ ಜಾನ್ಸ್ ರಸ್ತೆಯಲ್ಲಿ ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ವೇಗವಾಗಿ ಮನೆಗೆ ಕೆಟಿಎಂ ಡ್ಯೂಕ್ ಬೈಕ್‍ನಲ್ಲಿ ಬರುತ್ತಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತಪಟ್ಟವರನ್ನು ಆಡುಗೋಡಿಯ ಮಹೇಶ್ (23)ಎಂದು ಗುರುತಿಸಲಾಗಿದೆ. ಕೆ.ಆರ್.ಪುರಂನ ಕಂಪನಿಯೊಂದರಲ್ಲಿ ವಿಡಿಯೋ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ಮಹೇಶ್ ರಾತ್ರಿ 10.45ರ ವೇಳೆಗೆ ಕೆಲಸ ಮುಗಿಸಿಕೊಂಡು ಅತಿ ವೇಗವಾಗಿ ಮನೆಗೆ ಬೈಕ್‍ನಲ್ಲಿ ಬರುತ್ತಿದ್ದರು. ಮಾರ್ಗಮಧ್ಯೆ ಸೆಂಟ್ ಜಾನ್ಸ್ ರಸ್ತೆಯ ಕೃಪಾನಿಧಿ ಕಾಲೇಜಿನ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

road Accident Flyover ಅತಿ ವೇಗ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ