ಅನಂತಕುಮಾರ್ ಹೆಗಡೆ ನಾಲಿಗೆಗೆ 1 ಕೋಟಿ

 one crore for Ananthakumar Hegde tongue

26-12-2017

ಕಲಬುರಗಿ: ಸಂವಿಧಾನ ಬದಲಾವಣೆಗೆ ಕೈಹಾದರೆ ತಲೆ, ಕೈಕಾಲುಗಳು ಕಟ್ ಮಾಡಲು ಹಣ ಘೋಷಣೆ ಮಾಡುತ್ತೇವೆ ಎಂದು, ಕಲಬುರಗಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ್ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಗೋ.ಮಧುಸೂದನ್ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸಂವಿಧಾನ ಹಾಗೂ ದೇಶದ್ರೋಹ ಹೇಳಿಕೆ ಯಾರೇ ನೀಡಲಿ ಮೊದಲು ನಾಲಿಗೆ, ಆನಂತರ ಕೈ ಕಾಲು, ಕುತ್ತಿಗೆ ಕಡಿಯುತ್ತೇವೆ ಎಂದಿದ್ದಾರೆ. ಅದಲ್ಲದೇ ಒಂದು ತಿಂಗಳಲ್ಲಿ ಅನಂತಕುಮಾರ್ ಹೆಗಡೆ ನಾಲಿಗೆ ಕಟ್ ಮಾಡಿದವರಿಗೆ ಒಂದು ಕೋಟಿ ರೂ. ಬಹುಮಾನ ನೀಡುವುದಾಗಿ  ಪಟ್ಟೇದಾರ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Zilla panchayath go Madhusadhan ಬಹುಮಾನ ಸಂವಿಧಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ