ಜನರಲ್ಲಿ ಭಯ ಹುಟ್ಟಿಸಲು ಕೊಲೆ

2 people Murdered a man to scare people

26-12-2017

ಬೆಂಗಳೂರು: ಕಳೆದ ಡಿ.21ರಂದು ರಾತ್ರಿ ಅಣ್ಣನ ವಿವಾಹದ ಮೆಹಂದಿ ಕಾರ್ಯಕ್ರಮದಂದೇ ತಮ್ಮ ರಿಜ್ವಾನ್‍ನನ್ನು ಕೊಲೆಗೈದ ಇಬ್ಬರು ಆರೋಪಿಗಳನ್ನು ದೇವರಜೀವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದೇವರಜೀವನಹಳ್ಳಿಯ ರೋಷನ್‍ ನಗರದ ಚೋಟಾ ಶಾಹೀದ್ ಮತ್ತು ಚನ್ನೈ ಶಾಹಿದ್ ಬಂಧಿತ ಆರೋಪಿಗಳಾಗಿದ್ದಾರೆ, ರಿಜ್ವಾನ್ ಯಾವಾಗಲೂ ನಮ್ಮನ್ನು ಗುರಾಯಿಸುತ್ತಿದ್ದನು, ಹಲವು ಬಾರಿ ಎಚ್ಚರಿಕೆ ನೀಡಿದರೂ ಆತನ ವರ್ತನೆ ಸರಿಯಾಗದಿದ್ದರಿಂದ ಆಕ್ರೋಶಗೊಂಡು ಕೊಲೆ ಮಾಡಿದೆವು ಎಂದು ಆರೋಪಿಗಳು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

ರೋಷನ್‍ನಗರದಲ್ಲಿ ನಮ್ಮನ್ನು ಕಂಡರೆ ಹೆದರಬೇಕು. ರಿಜ್ವಾನ್ ಅಣ್ಣನ ಮದುವೆಯ ಮೆಹಂದಿಯಲ್ಲಿ ಸೇರಿದ್ದವರಲ್ಲಿ ಹೆದರಿಕೆ ಹುಟ್ಟಿಸಿ, ಹವಾ ಸೃಷ್ಠಿಸಲು ಕೊಲೆ ಮಾಡಿದೆವು ಎಂದು ಆರೋಪಿಗಳು ಹೇಳಿಕೆ ನೀಡಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ದೇವರ ಜೀವನಹಳ್ಳಿ ಪೊಲೀಸರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder Investigation ವಿಚಾರಣೆ ಮದುವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ