ಬಿಎಸ್ ವೈಗೆ ಮಲ್ಲಿಕಾರ್ಜುನ್ ತಿರುಗೇಟು

S.S mallikharjun tong to yeurappaddy

26-12-2017

ದಾವಣಗೆರೆ: ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯನವರು ಎಂದು, ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ. ದಾವಗೆರೆಯಲ್ಲಿಂದು ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು, ಸಿಎಂ ಎಲ್ಲೆಲ್ಲಿ ಹೋಗ್ತಾರೋ ಅವರ ಹಿಂದೆ ಪರಿವರ್ತನಾ ಯಾತ್ರೆ ಬರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸಂವಿಧಾನ ಬದಲು ಮಾಡಲು ಹೊರಟಿದ್ದಾರಂತೆ,‌ ಗಾಂಧೀಜಿ, ನೆಹರು, ಅಂಬೇಡ್ಕರ್ ಅಂತ:ಹವರು ಮಾಡಿದ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ ಎಂದರೆ ಯಾವ ಮಟ್ಟಕ್ಕಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ದಾವಣಗೆರೆ ಜಿಲ್ಲೆಗೆ ಖರ್ಚು ಮಾಡಿದ ಹಣದ ಬಗ್ಗೆ ಶ್ವೇತ ಪತ್ರ ಹೊರಡಿಸಿ ಎಂದು ಯಡಿಯೂರಪ್ಪ ಹೇಳಿದ್ದಾರೆ, ಅಲ್ಲದೇ ದಾವಣಗೆರೆ ಸ್ಮಾರ್ಟ್ ಸಿಟಿ ಮಾಡಲು 600 ಕೋಟಿ ರೂ. ನೀಡಲಾಗಿದೆ ಎಂದಿದ್ದಾರೆ, ಆದರೆ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಮಲ್ಲಿಕಾರ್ಜುನ್ ಅವರು ಹೇಳಿದ್ದಾರೆ. ತಂದೆ-ಮಗ ಇಬ್ಬರೂ ಕೊಟ್ಟ ಹಣದ ಬಡ್ಡಿ ತಿನ್ನುತ್ತಿದ್ದಾರೆ, ಯಡಿಯೂರಪ್ಪ ಅವ್ರಿಗೆ ನಾಚಿಕೆ ಆಗಬೇಕು. ನಾವು ತಂದೆ-ಮಗ ಇದುವರೆಗು ನಾವು ದುಡಿದ ದುಡ್ಡಲ್ಲೇ ಜೀವನ ನಡೆಸುತ್ತಿದ್ದೇವೆ‌. ದಾವಣಗೆರೆಯಲ್ಲೇ ಬೇಕಾದರೆ ಶ್ವೇತಪತ್ರ ಹೊರಡಿಸಲು ಸಿದ್ಧ ಎಂದು, ಯಡಿಯೂರಪ್ಪ ಆರೋಪಕ್ಕೆ ಎಸ್.ಎಸ್ ಮಲ್ಲಿಕಾರ್ಜುನ ತಿರುಗೇಟು ನೀಡಿದ್ದಾರೆ.

ಅದಲ್ಲದೇ ಹದಿನೈದು ದಿನಗಳಿಂದ ಸಿಎಂ ಸತತ ಪ್ರವಾಸ ಮಾಡುತ್ತಿದ್ದಾರೆ, ಪ್ರತಿಯೊಂದು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ, ಪರಿಶೀಲನೆ ಮಾಡುತ್ತಿದ್ದಾರೆ. ಹೊನ್ನಾಳಿ ಕ್ಷೇತ್ರಕ್ಕೆ ಸುಮಾರು 2300 ಕೋಟಿ ರೂ. ಅನುದಾನ ನೀಡಲಾಗಿದೆ. ದಾವಣಗೆರೆ ಜಿಲ್ಲೆಗೆ ಸುಮಾರು 10000 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದವರು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

S.S mallikharjun yeurappaddy ಶ್ವೇತಪತ್ರ ಗಾಂಧೀಜಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ