ಲವ್ ದೋಖಾ: 3 ಯುವತಿಯರಿಗೆ ಮೋಸ

Love Dokha: Escape With Girlfriend

26-12-2017

ಬೆಂಗಳೂರು: ಪ್ರೀತಿ ಮಾಯೆ ಹುಷಾರು ಅಂತಾ ಹೇಳುತ್ತಾರೆ. ಆದರೂ ಕೆಲ ಮುಗ್ಧ ಹುಡುಗಿಯರನ್ನು ಮೋಸ ಮಾಡಲೆಂದು ಕೆಲವರು ಪ್ರೀತಿ ಎಂಬ ಮುಖವಾಡವನ್ನು ಧರಿಸುತ್ತಾರೆ. ಇದೇ ರೀತಿಯಾದ ಲವ್ ದೋಖಾ ಪ್ರಕರಣವೊಂದು ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ವಿನೋದ್ ಎಂಬಾತನೇ ಯುವತಿ ಮತ್ತು ಅಪ್ರಾಪ್ತ ಬಾಲಕಿಗೆ ಮೋಸ ಮಾಡಿದ ಕಾಮುಕ. ವಿನೋದ್ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಯುವತಿಯರಿಗೆ ಮೋಸ ಮಾಡಿದ್ದಾನೆ. ಇತ್ತೀಚೆಗೆ ಥಣಿಸಂದ್ರ ನಿವಾಸಿಯಾಗಿರುವ ಬಾಲಕಿಯೊಬ್ಬಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.

ಮೂಲತಃ ಪಶ್ಚಿಮ ಬಂಗಾಳದ ನಿವಾಸಿಗಳಾದ ಬಾಲಕಿ ಮತ್ತವರ ಪೋಷಕರು. ಬೆಂಗಳೂರು ನಗರಕ್ಕೆ ಬಂದು ಸುಮಾರು 10 ವರ್ಷಗಳಾಗಿದ್ದು, ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾರೆ. ಬಾಲಕಿಯು ನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿನೋದ್ ಬಾಲಕಿಯ ಎದುರು ಮನೆಯಲ್ಲಿ ವಾಸವಾಗಿದ್ದನು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದನು. ಈ ಸಂಬಂಧ ಬಾಲಕಿ ಪೋಷಕರು ವಿನೋದನಿಗೆ ಮನೆಯತ್ತ ಬರಕೂಡದು ಎಂದು ಎಚ್ಚರಿಸಿದ್ದರು.

ಇದನ್ನು ಲೆಕ್ಕಿಸದ ವಿನೋದ್, ಡಿಸೆಂಬರ್ 02ರಂದು ಶಾಲೆಗೆ ಹೋಗದೇ ಬಾಲಕಿ ಮನೆಯಲ್ಲಿದ್ದು, ಪೋಷಕರು ಎಂದಿನಂತೆ ತಮ್ಮ ಕೆಲಸಕ್ಕೆ ತೆರಳಿದ ವೇಳೆ ವಿನೋದ್ ಬಾಲಕಿಯನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಬಾಲಕಿ ಪೋಷಕರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿನೋದನ ಪತ್ತೆಗೆ ವಿಶೇಷ ಜಾಲ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ