ಸಂಸದ-ಸಚಿವರ ನಡುವೆ ಟ್ವಿಟರ್ ನಲ್ಲಿ ವಾರ್

Kannada News

15-04-2017

ಮೈಸೂರು:  ಟ್ವಿಟರ್‌ನಲ್ಲಿ ಪರಸ್ಪರ ಕಾಲೆಳೆದುಕೊಂಡಿರುವ ಯುವ ಜನಪ್ರತಿನಿಧಿಗಳು. ಮೈಸೂರು ಕೊಡಗು ಸಂಸದ ಪ್ರತಾಪ್‌ಸಿಂಹ, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಟ್ವಿಟರ್ ನಲ್ಲಿ ವಾರ್. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಫಲಿತಾಂಶ ಕುರಿತು ಟ್ವಿಟರ್ ನಲ್ಲೆ ವಾದ ಪ್ರತಿವಾದ ನಡೆಸಿರುವ ಯುವ ಜನಪ್ರತಿನಿಧಿಗಳು. ಸಂಸದ ಪ್ರತಾಪ್‌ಸಿಂಹರನ್ನು ಪೇಪರ್ ಸಿಂಹ ಎಂದಿರುವ ಸಚಿವ ಪ್ರಿಯಾಂಕ ಖರ್ಗೆ. ಪೇಪರ್ ಸಿಂಹ ಎಂದಿದ್ದಕ್ಕೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ. ನಿಮ್ಮ ಪ್ರಿಯಾಂಕಾ ಎಂಬ ಹೆಸರೇ ನೆಹರು ಕುಟುಂಬಕ್ಕೆ ಇರುವ ಗುಲಾಮಗಿರಿಯ ಸಂಕೇತ, ಪದಗಳು ಪುಕ್ಕಟೆಯಾಗಿ ಸಿಗುತ್ತವೆ, ಮಾತಾಡುವಾಗ ಎಚ್ಚರಿಕೆ ಇರಲಿ ಎಂದು ತಿರುಗೇಟು ಕೊಟ್ಟಿರುವ ಸಿಂಹ.

ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದ ಕೂಡಲೇ, ಕ್ಷೇತ್ರ ಬದಲಿಸಿದರು, ಏಕೆಂದರೆ ಅವರ ಸಾಧನೆ ಆ ಕ್ಷೇತ್ರದಲ್ಲಿ ಶೂನ್ಯ. ನಿಮ್ಮ ತಂದೆ ನಿಮ್ಮನ್ನು ಮಂತ್ರಿ ಮಾಡಲು ಮುಖ್ಯಮಂತ್ರಿ ಆಗುವ ಕನಸನ್ನೇ ಕೈ ಬಿಟ್ಟರು, ಇಷ್ಟು ಸಾಕಾ ಎಂದು ಟ್ವೀಟರ್ ನಲ್ಲೆ ಕೆಣಕಿರುವ ಸಂಸದ ಪ್ರತಾಪ್ ಸಿಂಹ. ಸಚಿವ ಪ್ರಿಯಾಂಕ ಖರ್ಗೆಗೆ ಮೀಸಲು ವಿಧಾನಸಭಾ ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರಕ್ಕೆ ಬಂದು ಸ್ಪರ್ಧಿಸುವಂತೆಯೂ ಸವಾಲು ಹಾಕಿರುವ ಪ್ರತಾಪ್ ಸಿಂಹ.

ಟ್ವಿಟರ್‌ನಲ್ಲೆ ಪ್ರತಾಪ್ ಸಿಂಹ ಸವಾಲು ಸ್ವೀಕರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ. ಬೇಕಿದ್ದರೆ ನಿಮ್ಮ ಎದುರಲ್ಲೇ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಪ್ರಿಯಾಂಕ ಖರ್ಗೆ ಮರು ಸವಾಲು. ಮರು ಸವಾಲಿಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ನಾನು ನಿಮ್ಮ ಮುಖ್ಯಮಂತ್ರಿ  ತವರಿನಲ್ಲೆ ಚುನಾವಣೆಗೆ ನಿಂತು ಗೆದ್ದಿದ್ದೇನೆ, ನೀವೇಕೆ, ನಿಮ್ಮ ತಂದೆಯೇ ನನ್ನ ಎದುರು ಸ್ಪರ್ಧಿಸಲಿ ಎಂದು ಪಂಥಹ್ವಾನ ನೀಡಿರುವ ಮೈಸೂರು ಕೊಡಗು ಸಂಸದ. ನಿಮ್ಮ ತಂದೆಯೇ ಸಾಮಾನ್ಯ ಕ್ಷೇತ್ರದಲ್ಲಿ ನಿಲ್ಲುವ ಧೈರ್ಯ ತೋರಿಲ್ಲ, ಇನ್ನೂ ನೀವು ಜನಕ್ಕೆ ಗೊತ್ತಿರುವುದೇ ನಿಮ್ಮ ತಂದೆಯ ಹೆಸರಿನಿಂದ ಎಂದು ಸಚಿವ ಪ್ರಿಯಾಂಕ ಖರ್ಗೆಗೆ ವ್ಯಂಗ್ಯದ ಉತ್ತರ ನೀಡಿರುವ ಸಂಸದ ಪ್ರತಾಪ್ ಸಿಂಹ.

ಸಂಸದರ ವ್ಯಂಗ್ಯಕ್ಕೆ ಉತ್ತರ ಕೊಟ್ಟಿರುವ ಪ್ರಿಯಾಂಕ ಖರ್ಗೆ ನೀವು ಚುನಾವಣಾ ಸೋಲಿನಿಂದ ಪಾಠ ಕಲಿತಿಲ್ಲ, ನನ್ನನ್ನು ಗೇಲಿ ಮಾಡುತ್ತಿದ್ದೀರಿ, ನಿಮ್ಮ ಕಾಲುಬಾಯಿ ರೋಗದಿಂದ ಉಪ ಚುನಾವಣೆಯಲ್ಲಿ ಸೋತಿದ್ದೀರಿ ಎಂದು ಕುಟುಕಿರುವ ಪ್ರಿಯಾಂಕ್ ಖರ್ಗೆ.  ನೀವು ಟಿಕೇಟ್ ಹೇಗೆ ಪಡೆದಿದ್ದೀರಿ ಎಂದು ನನಗೆ ಗೊತ್ತು ಅಂತ ಪ್ರತಾಪ್‌ಸಿಂಹರನ್ನು ಕೆಣಕಿರುವ ಪ್ರಿಯಾಂಕ್ ಖರ್ಗೆ.

ಅದಕ್ಕೆ ಪ್ರತಿಯಾಗಿ ನಿಮ್ಮ ಬಂಡವಾಳವು ನನಗೆ ಗೊತ್ತಿದೆ, ನಿಮಗೆ ಅಧಿಕಾರ ಬಂದಿದ್ದು ನಿಮ್ಮ ತಂದೆಯಿಂದ, ನನಗೆ ಅಧಿಕಾರ ಸಿಕ್ಕಿದ್ದು ನನ್ನ ಪರಿಶ್ರಮ ಮತ್ತು ಜನರ ವಿಶ್ವಾಸದಿಂದ ಎಂದು ಟ್ವಿಟ್ ಮಾಡಿರುವ ಸಂಸದ ಪ್ರತಾಪ್‌ಸಿಂಹ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ