ಡಿ.31ಕ್ಕೆ ರಜನಿ ರಾಜಕೀಯಕ್ಕೆ ಎಂಟ್ರಿ?

Rajinikanth and Politics

26-12-2017 301

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರಾ? ನಮಗಂತೂ ಗೊತ್ತಿಲ್ಲ. ಈ ಬಗ್ಗೆ ಸ್ವತಃ ರಜನಿ ಅವರಿಗೂ ಸ್ಪಷ್ಟತೆ ಇದ್ದಂತೆ ಕಾಣುವುದಿಲ್ಲ. ಆದರೆ, ಚೆನ್ನೈನಲ್ಲಿ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ರಜನಿಕಾಂತ್, ಇದೇ ಡಿಸೆಂಬರ್ 31 ತಮ್ಮ ರಾಜಕೀಯ ನಿಲುವನ್ನು ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ.

ರಾಜಕಾರಣಕ್ಕೆ  ನಾನು ಹೊಸಬ ಅಲ್ಲ ಎಂದಿರುವ ರಜನಿಕಾಂತ್, ಅದರ ಬಗ್ಗೆ ಅಧ್ಯಯನ ಮಾಡುವುದಕ್ಕೆ ಮತ್ತು ತಂತ್ರಗಾರಿಕೆ ರೂಪಿಸುವುದಕ್ಕೆ ಸಮಯ ಹಿಡಿಯಿತು ಎಂದಿದ್ದಾರೆ. ‘ಚುನಾವಣೆ ಅನ್ನುವುದು ಯುದ್ಧವಿದ್ದಂತೆ, ಅದು ಬಂದಾಗ ನೋಡಿಕೊಳ್ಳುತ್ತೇವೆ. ನಾವು ಯುದ್ಧ ಗೆಲ್ಲಬೇಕು, ಕೇವಲ ಧೈರ್ಯವೊಂದರ ಬಲದಿಂದಲೇ ಯುದ್ಧ ಗೆಲ್ಲಲು ಸಾಧ್ಯವಿಲ್ಲ ಅದಕ್ಕೆ ತಕ್ಕ ತಂತ್ರವೂ ಇರಬೇಕು’ ಎಂದು ಹೇಳಿದ್ದಾರೆ. ‘ನನ್ನ ರಾಜಕೀಯ ಪ್ಲಾನ್ ಏನು ಅನ್ನುವುದನ್ನು ತಿಳಿಯಲು ಜನರಿಗಿಂತಲೂ ಹೆಚ್ಚಾಗಿ ಮಾಧ್ಯಮದವರಿಗೆ ಹೆಚ್ಚು ಆಸಕ್ತಿ’ ಎಂದು ರಜನಿ ಛೇಡಿಸಿದ್ದಾರೆ.

‘ನಾನೇನಾದರೂ ರಾಜಕೀಯ ರಂಗಕ್ಕೆ ಬಂದರೆ, ಸತ್ಯವಾದ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಮತ್ತು ಹಣ ಮಾಡಲು ರಾಜಕೀಯದಲ್ಲಿರುವಂಥ ಜನರನ್ನು ಹತ್ತಿರ ಸೇರಿಸುವುದಿಲ್ಲ’ ಎಂದು ರಜನಿಕಾಂತ್ ಹೇಳಿದ್ದಾರೆ.

ಒಂದುಕಾಲದಲ್ಲಿ ಬೆಂಗಳೂರಿನ ಬಿಟಿಎಸ್ ಬಸ್‌ನಲ್ಲಿ ಟಿಕೆಟ್ ಕೊಡುತ್ತಾ, ರೈಟ್ ರೈಯ್ಯ..ಎನ್ನುತ್ತಿದ್ದ ಈ ಸುಂದರ, ತಮಿಳುನಾಡಿಗೆ ಹೋಗಿದ್ದು ಅಲ್ಲಿ ಸ್ಟೈಲ್ ಕಿಂಗ್ ಅನ್ನಿಸಿಕೊಂಡಿದ್ದು, ತಮಿಳು ಜನರ ಮನ್ನಣೆಗಳಿಸಿ ಸೂಪರ್ ಸ್ಟಾರ್ ಆಗಿ ಮೆರೆದಿದ್ದು, ಒಂದು ಅದ್ಬುತವೇ ಸರಿ. ಇದೀಗ ರಾಜಕೀಯ ಕ್ಷೇತ್ರದತ್ತ ದೃಷ್ಟಿ ಹಾಯಿಸಿರುವ ರಜನಿಕಾಂತ್, ತುಂಬಾ ಅಳೆದು ಸುರಿದು ಕೈಗೊಳ್ಳುತ್ತಿರುವ ನಿರ್ಧಾರ ಏನಿರಬಹುದು ಅನ್ನುವುದು ಸಾಕಷ್ಟು ಕುತೂಹಲ ಕೆರಳಿಸಿದೆ.ಸಂಬಂಧಿತ ಟ್ಯಾಗ್ಗಳು

Rajinikanth Pliticaics ಸೂಪರ್ ಸ್ಟಾರ್ ಮಾಧ್ಯಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ