ಕಾಡಾನೆಗಳ ದಾಳಿ ಆತಂಕದಲ್ಲಿ ಗ್ರಾಮಸ್ಥರು

wild elephant attack on villager

26-12-2017

ಚಿಕ್ಕಮಗಳೂರು: ಕಾಡಾನೆಗಳ ದಾಳಿಯಿಂದ ಮೂರು ಮನೆಗಳಿಗೆ ಹಾನಿಯಾಗಿರುವ ಘಟನೆಯು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದಲ್ಲಿ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮದಲ್ಲಿ ಆನೆಗಳು ದಾಂದಲೆ ಮುಂದುವರೆದಿದ್ದು, ನಿನ್ನೆ ತಡರಾತ್ರಿ ಮನೆಗಳ ಮೇಲೆ ಏಕಾಏಕಿ ದಾಳಿ ಮಾಡಿವೆ. ಮನೆಯ ಗೋಡೆಗಳು ಮತ್ತು ಮನೆ ಮುಂದೆ ಹಾಕಿದ್ದ ಚಪ್ಪರಗಳನ್ನು ಕಿತ್ತುಹಾಕಿವೆ. ಗ್ರಾಮದಲ್ಲಿನ ಸಂಪತ್ ಎಂಬುವರ ಮನೆ ಹೆಚ್ಚಿನ ಹಾನಿಗೊಳಗಾಗಿದ್ದು, ಕುಟುಂಬಸ್ಥರು ಆಘಾತಗೊಂಡಿದ್ದಾರೆ. ಇನ್ನು ಗ್ರಾಮದಲ್ಲೆಲ್ಲಾ ಆನೆಗಳು ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕದಲ್ಲೇ ದಿನದೂಡುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಇನ್ನು ವಿಷಯ ತಿಳಿದರೂ ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Elephant attack Chikmagalur ಕಾಡಾನೆ ಅರಣ್ಯಾಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ