ಗುಡಿಸಲಿಗೆ ಬೆಂಕಿ ಬೀದಿಗೆ ಬಿದ್ದ ಕುಟುಂಬ

Fire accident in ramanagara village

26-12-2017

ರಾಮನಗರ: ಎರಡು ಪ್ರತ್ಯೇಕ ಕಡೆ ನಡೆದ ಬೆಂಕಿ ಅವಘಡದಲ್ಲಿ ಜಾನುವಾರುಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ರಾಮನಗರದಲ್ಲಿ ಗುಡಿಸಲಿಗೆ ಬೆಂಕಿ ಬಿದ್ದು, ಗುಡಿಸಲಿನ ಜೊತೆಗೆ ನಾಲ್ಕು ಮೇಕೆಗಳು ಸಜೀವ ದಹನವಾಗಿವೆ. ರಾಮನಗರ ತಾಲ್ಲೂಕು, ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇರುಳಿಗರ ಕಾಲೋನಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುಡಿಸಲು ಮತ್ತು ಮೇಕೆಗಳು ಹಲಗಮ್ಮ ಎಂಬುವರಿಗೆ ಸೇರಿವೆ. ಇವುಗಳ ಜೊತೆಗೆ ಗುಡಿಸಲಿನಲ್ಲಿದ್ದ ಬಟ್ಟೆಗಳ ಜೊತೆಗೆ ದಿನ ಬಳಕೆ ವಸ್ತುಗಳು ಕೂಡ ನಾಶವಾಗಿವೆ. ಹಲಗಮ್ಮ ಮತ್ತು ಅವರ ಮಗಳು ಯಾವುದೇ ಗಾಯಗಳಿಲ್ಲದೇ ಪ್ರಾಣಾಪಯಾದಿಂದ ಪರಾಗಿದ್ದು, ಎಲ್ಲವನ್ನು ಕಳೆದುಕೊಂಡ ಕುಟುಂಬ ಬೀದಿಗೆ ಬಿದ್ದಿದೆ.

ಇನ್ನೊಂದೆಡೆ ಬೆಳಗಾವಿಯ ಚಿಕ್ಕೋಡಿಯಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ದನಕರುಗಳು ಸಜೀವ ದಹನವಾಗಿವೆ. ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮದಲ್ಲಿ ಘಟನೆ ನಡೆದಿದೆ. ಎಮ್ಮೆ, ಆಕಳು ,ಆಡು ಸೇರಿದಂತೆ ಸುಮಾರು 5 ದನಗಳು ಬೆಂಕಿಗೆ ಆಹುತಿಯಾಗಿವೆ. ದತ್ತಾ ಸೂರ್ಯವಂಶಿ ಎಂಬುವರಿಗೆ ಸೇರಿದ ದನಕರುಗಳಾಗಿದ್ದು, ಜೀವನ ಸಾಗಿಸಲು ಜಾನುವಾರುಗಳನ್ನು ಸಾಕುತ್ತಿದ್ದ ಕುಟುಂಬಕ್ಕೆ, ಘಟನೆಯಿಂದ ಆಘಾತವಾಗಿದೆ.


ಸಂಬಂಧಿತ ಟ್ಯಾಗ್ಗಳು

fire accident animals ಹೋಬಳಿ ಅವಘಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ