ಡೀಲರ್ ಶಿಪ್ ನೆಪದಲ್ಲಿ ಹಣ ವಂಚನೆ23-12-2017

ಬೆಂಗಳೂರು: ಪತಂಜಲಿ ಡೀಲರ್ ಶಿಪ್ ಕೊಡಿಸುವುದಾಗಿ ನಂಬಿಸಿ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆ ಪ್ರಕರಣ ಬೆಂಗಳೂರಲ್ಲಿ ನಡೆದಿದೆ. ರಾಜಾಜಿನಗರ ನಿವಾಸಿ ಲಕ್ಷ್ಮಣ್ ಇಲಾಗರ್ ಎಂಬುವವರಿಗೆ, ಒಂದು ಲಕ್ಷಕ್ಕೂ ಹೆಚ್ಚು ಹಣ ಪಡೆದು ಆಚಾರ್ಯ ಋಷಿಕೇಶವನ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾನೆ. ಪತಂಜಲಿ ಆಯುರ್ವೇದಿಕ್ ವ್ಯಾಪಾರ ಮಾಡಲು ಮುಂದಾಗಿದ್ದ ವ್ಯಾಪಾರಿ ಲಕ್ಷ್ಮಣ್ ಗೆ, ಪತಂಜಲಿ ಡೀಲರ್ ಶಿಪ್ ಪಡೆಯಲು ಆನ್ ಲೈನ್ ನಲ್ಲಿ ಸರ್ಚ್ ಮಾಡುವಾಗ ಆಚಾರ್ಯ ಎಂಬುವರ ಪರಿಚಯವಾಗಿತ್ತು.

ಆಚಾರ್ಯ ತಾನು ಪತಂಜಲಿ ಡೀಲರ್ ಶಿಪ್ ಕೊಡಿಸುವುದಾಗಿ ನಂಬಿಸಿ, ಈ ಕುರಿತು ಎಲ್ಲವನ್ನೂ ತಾನೇ ಮಾಡುವುದಾಗಿ ತಿಳಿಸಿ, ಹಣವನ್ನೂ ಆಚಾರ್ಯ ತನ್ನ ಅಕೌಂಟ್ ಗೆ 1 ಲಕ್ಷ 10 ಸಾವಿರ ಹಣ ಬರುವಂತೆ ಮಾಡಿಕೊಂಡಿದ್ದಾನೆ, ಹಣ ಬರುತ್ತಿದ್ದಂತೆ ಆಚಾರ್ಯ ಪರಾರಿಯಾಗಿದ್ದಾನೆ. ಇನ್ನು ಹಣ ಕಳೆದುಕೊಂಡ ಲಕ್ಷ್ಮಣ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Patanjali online fraud ಡೀಲರ್ ಶಿಪ್ ಸೈಬರ್ ಕ್ರೈಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಪತಂಜಲಿ ಡೀಲರ್ ಶಿಪ್ ಕೊಡಿಸುವುದಾಗಿ ನಂಬಿಸಿ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 
  • Rani
  • Professional