‘ಯಡಿಯೂರಪ್ಪ ರೈತರಿಗೆ ಟೋಪಿ ಹಾಕಿದ್ದಾರೆ’

Mahadayi: siddaramaiah vs yeddyurappa

23-12-2017

ಹಾವೇರಿ: ಯಡಿಯೂರಪ್ಪ ರೈತರಿಗೆ ಟೋಪಿ ಹಾಕಿದ್ದಾರೆ, ಪರಿವರ್ತನಾ ಯಾತ್ರೆಯಲ್ಲಿ ಪರಿಕ್ಕರ್ ಪತ್ರ ಓದಿ ರೈತರಿಗೆ ಟೋಪಿ ಹಾಕಿದ್ದಾರೆ ಎಂದು, ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾವೇರಿಯಲ್ಲಿಂದು ಮಾತನಾಡಿದ ಅವರು, ಕಳೆದ ವರ್ಷ ಸೆಪ್ಟೆಂಬರ್ ನಲ್ಲೆ ವಿವಾದದ ಇಥ್ಯರ್ತಕ್ಕಾಗಿ ಮನವಿ ಮಾಡಲಾಗಿತ್ತು. ಆದರೆ, ಬಿಜೆಪಿಯವರಿಗೆ ಈಗ ಇದರ ಬಗ್ಗೆ ನೆನಪಾಗಿದೆ, ಚುನಾವಣೆ ಸಂದರ್ಭದಲ್ಲಿ ಈಗ ವಿವಾದದ ನೆನಪಾಗಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಮಹದಾಯಿ ವಿವಾದಕ್ಕೆ ಗೋವಾ ಕಾಂಗ್ರೆಸ್ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿವಾದ ರಾಜಕೀಯ ಪಕ್ಷಗಳ ವಿಚಾರವಲ್ಲ, ಎರಡು ರಾಜ್ಯಗಳ ವಿಚಾರ, ಹೀಗಾಗಿ ಅಲ್ಲಿನ ಕಾಂಗ್ರೆಸ್ ವಿರೋಧಿಸುವುದು ಸಹಜ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

siddaramaiah mahadayi ಮಹದಾಯಿ ವಿವಾದ ರೈತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ