ಕಾಂಗ್ರೆಸ್ ತೊರೆದ ಎಚ್.ಆರ್.ಶ್ರೀನಾಥ್

HR Srinath left Congress

23-12-2017

ಕೊಪ್ಪಳ: ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್‌. ಶ್ರೀನಾಥ್ ನೇತೃತ್ವದಲ್ಲಿ ಗಂಗಾವತಿಯ 12 ಜನ ನಗರಸಭೆ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಕೆಪಿಸಿಸಿ ಅಧ್ಯಕ್ಷ ಜಿ.‌ಪರಮೇಶ್ವರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಈ ವೇಳೆ ಮಾತನಾಡಿದ ಎಚ್.ಆರ್‌. ಶ್ರೀನಾಥ್, ಕೊಪ್ಪಳ ಜಿಲ್ಲೆಯಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಬೆಲೆ ಇಲ್ಲದಂತಾಗಿದೆ, ಇಂದಿರಾ ಗಾಂಧಿಯವರ ಕಾಲದಿಂದಲೂ ಹೈದರಾಬಾದ್ ಕರ್ನಾಟಕ ಭಾಗದ ಕಾಂಗ್ರೆಸ್ ಕೆಲಸ ನಮ್ಮ ನಿವಾಸದಿಂದಲೇ ಆರಂಭವಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಗಂಗಾವತಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮಕ್ಕೆ ಮೂಲ ಕಾಂಗ್ರೆಸ್ಸಿಗರನ್ನ ಸೌಜನ್ಯಕ್ಕೂ ಆಹ್ವಾನಿಸಿಲ್ಲ ಎಂದು ದೂರಿದ್ದಾರೆ.

ಇಕ್ಬಾಲ್ ಅನ್ಸಾರಿ ಇನ್ನೂ ಪಕ್ಷವನ್ನೇ ಸೇರಿಲ್ಲ, ಆದರೂ ಸಿದ್ದರಾಮಯ್ಯ ಅನ್ಸಾರಿ ಪರ ಪ್ರಚಾರ ಮಾಡುತ್ತಾರೆ. ರಾಜ್ಯದಲ್ಲಿ ಈಗ ಇರುವುದು ಸಿದ್ದರಾಮಯ್ಯ ಕಾಂಗ್ರೆಸ್, ಸಿದ್ದರಾಮಯ್ಯ ನಿಲುವಿನಿಂದ ಬೇಸತ್ತು ಪಕ್ಷ ತೊರೆಯುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೈಜಾಕ್ ಆಗಿದೆ, ಕಾಂಗ್ರೆಸ್ ಪಕ್ಷದ ಅಧಿಕಾರ ಸಿದ್ದರಾಮಯ್ಯ ಕೈಯ್ಯಲ್ಲಿದೆ, ರಾಜ್ಯದಲ್ಲಿನ ಎಲ್ಲ ಮೂಲ ಕಾಂಗ್ರೆಸ್ಸಿಗರು ರಾಜೀನಾಮೆ ನೀಡಿ ಸಿದ್ದರಾಮಯ್ಯರ ಹಿಟ್ಲರ್ ಆಡಳಿತವನ್ನು ವಿರೋಧಿಸಬೇಕು, ನಾನು ಯಾವ ಪಕ್ಷವನ್ನು ಸೇರುವ ವಿಚಾರ ಮಾಡಿಲ್ಲ, ಮೂಲ ಕಾಂಗ್ರೆಸ್ಸಿಗರನ್ನು ಭೇಟಿ ಮಾಡಿ ಮುಂದಿನ ನಿಲುವು ಪ್ರಕಟಿಸುತ್ತೇನೆ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.R srinath Congress ಹೈಜಾಕ್ ಹಿಟ್ಲರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ