ಅತ್ಯಾಚಾರ-ಕೊಲೆ: ಕಣ್ಣೀರ ಪ್ರತಿಭಟನೆ

Rape-murder: parents protest

23-12-2017

ವಿಜಯಪುರ: ವಿಜಯಪುರದಲ್ಲಿ ನಡೆದ ಬಾಲಕಿ ಮೇಲೆ ರೇಪ್ ಆಂಡ್ ಮರ್ಡರ್ ಖಂಡಿಸಿ, ಇಂದು ವಿಜಯಪುರ ಬಂದ್ ಮಾಡಲಾಗಿದ್ದು, ಬಾಲಕಿ ದಾನಮ್ಮ ನಿವಾಸದಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಕಣ್ಣೀರು ಹಾಕುತ್ತಲೇ ಪ್ರತಿಭಟನೆಯಲ್ಲಿ ಮೃತ ಬಾಲಕಿಯ ತಾಯಿ ಸಿದ್ದಮ್ಮ ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದರು. ಘಟನೆ ಖಂಡಿಸಿ ಗಾಂಧಿ ಚೌಕ್ ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ ವೇಳೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ, ನ್ಯಾಯ ಒದಗಿಸುವಂತೆ ಕುಟುಂಬಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rape protest ಗಾಂಧಿ ವೃತ್ತ ಪ್ರತಿಭಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ