‘ಮಹದಾಯಿ ಕಗ್ಗಂಟಿಗೆ ಸೋನಿಯಾ ಕಾರಣ’

Sonia

23-12-2017 299

ಹುಬ್ಬಳ್ಳಿ: ಮಹದಾಯಿ ನೀರಿಗಾಗಿ ಬಿಜೆಪಿ ಮೊದಲಿನಿಂದ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಮೊದಲಿನಿಂದಲೂ ರಾಜಕೀಯ ಮಾಡಿಕೊಂಡೇ ಬಂದಿದೆ, ಈಗ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಕಾಂಗ್ರೆಸ್ ಹೇಳುತ್ತಿದೆ. ಗೋವಾ ಮತ್ತು ಕೇಂದ್ರದಲ್ಲಿ ತಾವೇ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಏನ್ ಮಾಡಿತು? ಎಂದು ಪ್ರಶ್ನಿಸಿದ ಅವರು, ಸೋನಿಯಾ ಗಾಂಧಿ ಹೇಳಿಕೆ ಮಹದಾಯಿ ವಿಚಾರ ಕಗ್ಗಂಟಾಗಲು ಕಾರಣ ಎಂದು ದೂರಿದ್ದಾರೆ.

ಕುಡಿಯುವ ನೀರಿನ ದೃಷ್ಟಿಯಲ್ಲಿ ಸಹಕಾರ ನೀಡೋದಾಗಿ ಪರಿಕ್ಕರ್ ಒಪ್ಪಿದ್ದಾರೆ ಎಂದ ಅವರು, ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಬೇಜವಾಬ್ದಾರಿ ಮನುಷ್ಯ, ಅಪ್ಪ-ಮಕ್ಕಳು ಜನ ಹಿತ ಮರೆತು ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಹದಾಯಿ ಕಾಮಗಾರಿಗೆ ಅಡ್ಡಗಾಲು ಹಾಕಿದ ಮನುಷ್ಯನಾತ. ಈ ಕುಮಾರಸ್ವಾಮಿ ಬಗ್ಗೆ ನಾನೇನ್ ಹೇಳೋಕಾಗುತ್ತೆ ಎಂದು, ಕುಮಾರಸ್ವಾಮಿ ಹೆಸರು ಕೇಳಿದ ತಕ್ಷಣ ಹರಿಹಾಯ್ದ ಯಡಿಯೂರಪ್ಪ, ತಾಳ್ಮೆ ಕಳೆದುಕೊಂಡವರಂತೆ ಮಾತನಾಡಿದ್ದಾರೆ. ನಾವಂತೂ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದ್ದೇವೆ. ಗೋವಾ ಸಿಎಂ ಬರೆದ ಪತ್ರ ಇಟ್ಕೊಂಡು ನ್ಯಾಯಾಧಿಕರಣದ ಮುಂದೆ ಹೋಗಲಿ, ಗೋವಾ ಕಾಂಗ್ರೆಸ್ ನಾಯಕರನ್ನ ಮೊದಲು ಒಪ್ಪಿಸಬೇಕು, ಎಂದು ಹೇಳಿಕೆ ನೀಡಿ ಮಾಧ್ಯಮದವರ ಪ್ರಶ್ನೆಗೆ ನೇರವಾಗಿ ಉತ್ತರಿಸಲಾಗದೇ ಕೈಮುಗಿದು ಎದ್ದು ಹೋದ ಘಟನೆಯೂ ನಡೆಯಿತು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ