ಯೋಗಿ ಯಾಕೆ: ‘ಇವರಿಗೆ ಓದೋಕೆ ಬರಲ್ವಾ’

Why Yogi:

23-12-2017

ಬೆಂಗಳೂರು: ಬಿಜೆಪಿ ನಾಯಕರು ಕಲಾವಿದರು, ಇವರದು ಡ್ರಾಮಾ ಟ್ರೂಪ್ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರು ತರ್ತೇವೆ ಎಂದು ಬಿಜೆಪಿಯವರು ನಾಟಕವಾಡುತ್ತಿದ್ದಾರೆ. ನಮ್ಮ ಸಿಎಂ ಗೋವಾ ಮುಖ್ಯಮಂತ್ರಿಗೆ ಹಲವಾರು ಬಾರಿ ಪತ್ರ ಬರೆದಿದ್ದರು. ಪರಿಕ್ಕರ್ ಬರೆದ ಪತ್ರ ಓದಲು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಕರೆದು ತರ್ತಾರೆ, ಯಾಕೆ ಇವರಿಗ್ಯಾರಿಗೂ ಓದೋದಕ್ಕೆ ಬರಲ್ವಾ ಎಂದು ವ್ಯಂಗ್ಯವಾಡಿದ್ದಾರೆ.

ಯುಪಿ ಸಿಎಂ ಟಿಪ್ಪು ಜಯಂತಿ ಬಗ್ಗೆ ಮಾತನಾಡ್ತಾರೆ, ನಾವು ರಾಮ,ಕೃಷ್ಣ ಸೇರಿದಂತೆ 26 ಜಯಂತಿ ಮಾಡುತ್ತೇವೆ ಎಂದು ತಿರುಗೇಟು ನೀಡಿದರು. ಉತ್ತರ ಪ್ರದೇಶದಲ್ಲಿ 11.6ರಷ್ಟು ಕ್ರೈಂ ರೇಟ್ ಇದೆ, ಯೋಗಿ ಆದಿತ್ಯನಾಥ್ ಮೊದಲು ಇದರ ಬಗ್ಗೆ ಗಮನ ಹರಿಸಲಿ ಎಂದು ಕಿಡಿಕಾರಿದ್ದಾರೆ. 80 ಹಸುಗೂಸುಗಳು ಸಾವನ್ನಪ್ಪಿರುವುದರ ಬಗ್ಗೆ ಅವರಿಗೆ ಯೋಚನೆ ಇಲ್ಲ, ಇಲ್ಲಿ ಟಿಪ್ಪು ಜಯಂತಿ ಬಗ್ಗೆ ಮಾತನಾಡಲು ಬರುತ್ತಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ