ಹಣ ಕೀಳುತ್ತಿದ್ದ 2 ಸ್ಟಾಫ್ ನರ್ಸ್ ಸೇರಿಂದತೆ ಐವರು ಸಿಬ್ಬಂದಿಗಳ ಅಮಾನತು

Kannada News

14-04-2017

ಬಳ್ಳಾರಿ : ಜಿಲ್ಲೆಯ ಸಂಡೂರಿನ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಂದ ಹಣ ಕೀಳುತ್ತಿದ್ದ 2 ಸ್ಟಾಫ್ ನರ್ಸ್ ಸೇರಿಂದತೆ ಒಟ್ಟು ಐವರು ಸಿಬ್ಬಂದಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಮೇಶ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ, ಸಿಬ್ಬಂದಿ ರೋಗಿಗಳ ಸಂಬಂಧಿಕರಿಂದ ಹಣ ಪಡೆಯುತ್ತಿದ್ದ ದೃಶ್ಯಗಳನ್ನೊಳಗೊಂಡ ವರದಿಯನ್ನು ಏಪ್ರಿಲ್ 5 ರಂದು ಪ್ರಕಟಿಸಿತ್ತು.

ಸಂಡೂರು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುವವರು ತಲಾ ಎರೆಡುವರೆ ಸಾವಿರ ರೂಪಾಯಿ ನೀಡ ಬೇಕೆಂಬುದು ಇಲ್ಲಿನ ಸಿಬ್ಬಂದಿಗಳ ಅಲಿಖಿತ ನಿಯಮವಾಗಿತ್ತು. ಕಡಿಮೆ ನೀಡದರೆ ತಿರಸ್ಕರಿಸುವುದು, ಉತ್ತಮ ಚಿಕಿತ್ಸೆಯೇ ನೀಡಲ್ಲ ಎಂದು ರೋಗಿಗಳಿಗೆ ಮತ್ತವರ ಸಂಬಂಧಿಕರಿಗೆ ಬೆದರಿಸುತ್ತಿದ್ದರು. ಇದು ಹಲವು ವರ್ಷಗಳಿಂದ ನಿರಂತರವಾಗಿನಡೆದುಕೊಂಡು ಬಂದಿತ್ತು.

ಇದರಿಂದ ಬೇಸತ್ತಿದ್ದ ರೋಗಿಯ ಸಿಬ್ಬಂದಿಯ ಸಂಬಂಧಿಕರೊಬ್ಬರು ಇಲ್ಲಿನ ಸಿಬ್ಬಂದಿ ಚಿಕಿತ್ಸೆ ನೀಡಲು ಹಣವನ್ನು ಪೀಡಿಸಿ ಪಡೆಯುವುದನ್ನು ಚಿತ್ರೀಕರಿಸಿ ಮಾಧ್ಯಮಗಳಿಗೆ ನೀಡಿದ್ದರು.  ಈ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ  ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಮೇಶ್ ಮತ್ತು ಜಿಲ್ಲಾ ಮಲೇರಿಯಾ ಅಧಿಕಾರಿ ಓಂ ಪ್ರಕಾರ್ಶ ಕಟ್ಟೀಮನಿ ಮತ್ತು ಸ್ವಯಂ ಪ್ರೇರಿತವಾಗಿ ಎಸಿಬಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ವಿಚಾರಣೆ ನಡೆಸಿದರು.

ಹೆರಿಗೆ ನಂತರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಂಡೂರಿನ ನಿಂಗರಾಜ್ ಅವರ ಪತ್ನಿ ಕುಸುಮಾ ಅವರ ಸಂಬಂಧಿಕರಿಂದ ಆಸ್ಪತ್ರೆಯ ಸಿಬ್ಬಂದಿ ಹಣ ಕೀಳುವ ದೃಶ್ಯದ ತುಣುಕ ಪಡೆದ ತನಿಖಾಧಿಕಾರಿಗಳು  ಇಲಾಕಾ ವಿಚಾರಣೆಯನ್ನು ಕಾಯ್ದಿರಿಸಿ ಹಣ ಪಡೆದ ಆಸ್ಪತ್ರೆಯ ಸ್ಟಾಫ್ ನರ್ಸ್ ಅನ್ನಪೂರ್ಣಮ್ಮ, ಈಶ್ವರಪ್ಪ, ಡಿ ಗ್ರೂಪ್ ನೌಕರ ಕೃಷ್ಣ ಸೂರ್ಯ ನಾರಾಯಣ ಮತ್ತು ಕುಮಾರಸ್ವಾಮಿ ಅವರನ್ನು ಅಮಾನತು ಮಾಡಿರುವುದಾಗಿ ಡಿಹೆಚ್‍ಓ ರಮೇಶ್ ಬಾಬು ತಿಳಿಸಿದ್ದಾರೆ.

ಪ್ರಕರಣವನ್ನು ಮುಚ್ಚಿಹಾಕಬೇಕೆಂದು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಅಮಾನತ್ ಆದವರು ಉತ್ತಮರೆಂದು ಲೆಟರ್ ಪಡೆಯಲಾಗಿತ್ತು. ಅಲ್ಲದೆ ಸ್ಥಳೀಯ ಶಾಸಕ ತುಕಾರಂ ಅವರ ಬೆಂಬಲಿಗರೂ ಅಮಾನತು ಮಾಡದಂತೆ ಒತ್ತಡ ಹೇರಿದ್ದರು ಎಂದು ಅಧಿಕಾರ ವಲಯ ಹೇಳುತ್ತಿದೆ. ಆದರೂ ದೂರುದಾರರು ಡಿಸಿ ಮತ್ತು ಜಿಪಂ ಸಿಈಓ ಅವರಿಗೆ ಸ್ವವಿವರ ವರದಿ ನೀಡಿ ಇಷ್ಟಾದರೂ ಕ್ರಮ ತೆಗೆದುಕೊಳ್ಳದಿದ್ದರೆ ಜನಸಾಮಾನ್ಯರಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾರಿಚೆಕೆ ಆಗಲಿದೆಂದು ಹೇಳಿದ ಮೇಲೆ ಇಂದು ಅಮಾನತು ಆದವರಿಗೆ ಆದೇಶ ಜಾರಿ ಮಾಡಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ