‘ಬಿಎಸ್ ವೈ ನಾಟಕ ನಡೆಸುತ್ತಿರಬಹುದು’-ಸಿಎಂ

siddaramaiah reaction on mahadayi letter and BSY

23-12-2017

ಧಾರವಾಡ: ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಕುರಿತಂತೆ ತಜ್ಞರ ಸಮಿತಿ ರಚನೆ ಮಾಡಿ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಿದ್ದು, ಈ ಸಮಿತಿ ಎಲ್ಲ ದಾಖಲೆಗಳನ್ನು ಕಲೆ ಹಾಕಿ ಸರ್ಕಾರಕ್ಕೆ ವರದಿ ನೀಡಲಿದೆ ಎಂದು ತಿಳಿಸಿದ್ದಾರೆ. ಅಲ್ಪಸಂಖ್ಯಾತ ಮಾನ್ಯತೆಗಾಗಿ ಐದು ಬೇರೆ ಬೇರೆ ಅರ್ಜಿಗಳು ಬಂದಿದ್ದವು, ಡಾ.ಎಸ್.ಎ ಜಾಮದಾರ್, ಮಾತೆ ಮಹಾದೇವಿ ಸೇರಿ ಐದು ಮಂದಿ ಅರ್ಜಿಗಳನ್ನು ನೀಡಿದ್ದರು. ಒಟ್ಟಾಗಿ ಮಾತಾಡಿಕೊಂಡು ಬರುವಂತೆ ನಾನು ಹೇಳಿದ್ದೆ. ಆದರೆ ಅವರೆಲ್ಲ ಒಟ್ಟಾಗಿ ಬಂದಿಲ್ಲ‌, ಹಾಗಾಗಿ ಈಗ ಸರ್ಕಾರ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ಮತನಾಡಿದ ಸಿಎಂ ಸಿದ್ದರಾಮಯ್ಯ, ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಒಕ್ಕೂಟ ವ್ಯವಸ್ಥೆಯಲ್ಲಿ ಗೋವಾ ಸಿಎಂ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಬೇಕು. ಆದರೆ ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿರಬೇಕು ಎಂದು ಆರೋಪಿಸಿದ್ದಾರೆ. ಬಿಜೆಪಿಯ ಪರಿವರ್ತನಾ ಯಾತ್ರೆ ಈ ಭಾಗದಲ್ಲಿ ನಡೆಯುತ್ತಿರುವುದರಿಂದ ಪತ್ರ ವ್ಯವಹಾರ‌ ನಡೆಸಿರಬೇಕು, ಎಲ್ಲಿ ತಮಗೆ ತೀವ್ರ ಪ್ರತಿಭಟನೆ ‌ವ್ಯಕ್ತವಾಗುತ್ತೋ ಅಂತ ಈ ನಾಟಕ ನಡೆಸುತ್ತಿರಬಹುದು ಎಂದಿದ್ದಾರೆ. ನಾನು ಸಾಕಷ್ಟು ಬಾರಿ ಪ್ರಧಾನಿ ಮೋದಿ ಮತ್ತು ಗೋವಾ ಸಿಎಂ ಮನೋಹರ್ ಪರಿಕ್ಕರ್ ಗೆ‌ ಲೆಟರ್ ಬರೆದಿದ್ದೆ, ಆದರೆ ಆ ಬಗ್ಗೆ ಗೋವಾ ‌ಸಿಎಂ, ಪ್ರಧಾನಿ ಮೋದಿ ಸ್ಪಂದಿಸಿರಲಿಲ್ಲ. ಅದಲ್ಲದೇ ಕರ್ನಾಟಕ ಸಿಎಂ ಬಗ್ಗೆ ನಂಬಿಕೆಯಿಲ್ಲ ಎಂದಿದ್ದರು ಎಂದು ಗೋವಾ ಸಿಎಂಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮಾತುಕತೆಗೆ ಎಲ್ಲೇ ಕರೆದರು ಹೋಗಿ ಮಾತುಕತೆ ನಡೆಸೋಕೆ ನಾನೂ ಸಿದ್ಧ, ನಮಗೆ ಮಹದಾಯಿ ವಿವಾದ ಇತ್ಯರ್ಥವಾದ್ರೇ ಸಾಕು ಎಂದು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ