ಶ್ರೀಗಂಧದ ಮರ ಕಳ್ಳತನ

Sandalwood tree theft

23-12-2017

ಚಿಕ್ಕಮಗಳೂರು: ಬೃಹತ್ ಗಾತ್ರದ ಶ್ರೀಗಂಧದ ಮರವನ್ನು ಕಡಿದು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಕೇಂದ್ರ ಗ್ರಂಥಾಲಯ ಆವರಣದಲ್ಲಿನ ಶ್ರೀಗಂಧ ಮರ ಕಡಿದು ಕಳ್ಳರು ಪರಾರಿಯಾಗಿದ್ದಾರೆ. ಗ್ರಂಥಾಲಯದಲ್ಲಿರುವ ಬೃಹತ್ ಗಾತ್ರದ ಶ್ರೀಗಂಧದ ಮರವನ್ನು ಗುರುತಿಸಿಕೊಂಡು, ಖದೀಮರು ಮರಕ್ಕೆ ಕೊಡಲಿ ಹಾಕಿದ್ದಾರೆ. ಪಕ್ಕದಲ್ಲೇ ಎಸ್ಪಿ ಕಚೇರಿ ಇದ್ದರು ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಇನ್ನು ಎಸ್ಪಿ ಕಚೇರಿ ಪಕ್ಕದಲ್ಲೇ ಈ ಕಳ್ಳತನ ನಡೆದಿರುವುದರಿಂದ, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಳೆದ ವಾರವಷ್ಟೇ ಡಿಸಿ ಕಚೇರಿ ಮುಂಭಾಗವೇ ಒಂದು ಶ್ರೀಗಂಧ ಮರ ಕಳ್ಳತನವಾಗಿತ್ತು. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಕುರಿತು ಕ್ರಮ ಕೈಗೊಂಡಿರುವ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sandalwood thief ಖದೀಮರು ಗ್ರಂಥಾಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ