'ಬಿಜೆಪಿಯವರದು ಡಬಲ್ ಗೇಮ್ ರಾಜಕಾರಣ'

Mahadayi issue :

22-12-2017 303

ಬೆಂಗಳೂರು: ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸುತ್ತಿವೆ, ರಾಜ್ಯದ ಜನತೆಯ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಬಿಜೆಪಿ ದ್ವಿಮುಖ ರಾಜಕಾರಣ ಮಾಡುತ್ತಿದ್ದು, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉತ್ತರ ಕರ್ನಾಟಕದ ಮತ ಪಡೆಯಲು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಹೋದಲ್ಲಿ ಬಂದಲ್ಲಿ ರಕ್ತ ಕೊಡ್ತೀನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಷಣ ಮಾಡುತ್ತಿದ್ದಾರೆ. ನಮಗೆ ಅವರ ರಕ್ತ ಬೇಡ. ನಮಗೆ ನೀರು ಬೇಕು ಎಂದು ಯಡಿಯೂರಪ್ಪ ಅವರ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಮಹದಾಯಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಲ್ಲಿಯ ತನಕ ಬಾಯಿ ಬಿಟ್ಟಿಲ್ಲ. ಮಹದಾಯಿ ವಿಚಾರದಲ್ಲಿ ತೀರ್ಪು ಕೊಡಲು ಅಮಿತ್ ಷಾ ಹಾಗೂ ಯಡಿಯೂರಪ್ಪ ಯಾರು ಎಂದು ಪ್ರಶ್ನಿಸಿದರು.

ಬಿಜೆಪಿಯ ಡಬಲ್ ಗೇಮ್ ರಾಜಕಾರಣ ಇದರಲ್ಲೇ ಗೊತ್ತಾಗುತ್ತದೆ. ಪರಿಕ್ಕರ್, ಅಮಿತ್ ಷಾ, ಯಡಿಯೂರಪ್ಪ ಎಲ್ಲರೂ ಸೇರಿ ಆಟವಾಡುತ್ತಿದ್ದಾರೆ. ಮಹದಾಯಿ ನೀರು ಇವರ ಆಸ್ತಿಯಲ್ಲ. ಇಂಥಹ ಆಟ ತುಂಬ ದಿನ ನಡೆಯುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಬೆಂಬಲ ಪಡೆಯಲು ನಡೆಯುತ್ತಿರುವ ನಾಟಕ ಇದು ಎಂದು ದೂರಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ