ಡೆಡ್‌ಲೈನ್ ಮತ್ತು ಲೈಫ್ ಲೈನ್…

Working On a Deadline? These Beverages Work As Well As Coffee

22-12-2017

ನೀವು ಈ ಕೆಲಸ ಇವತ್ತು ಮುಗಿಸಲೇಬೇಕು ಎಂಬ ಡೆಡ್‌ಲೈನ್ ಪಡೆದಿದ್ದೀರಾ? ಹಾಗಿದ್ದರೆ, ಇವತ್ತು ರಾತ್ರಿಯಿಡೀ ಕೆಲಸ ಮಾಡುವಾಗ ನಿದ್ದೆ ಬರದಿರಲಿ ಎಂದು ಹಲವು ಬಾರಿ ಕಾಫಿ, ಟೀ ಕುಡಿಯುತ್ತೀರಿ? ನಿಲ್ಲಿ, ಅಷ್ಟೊಂದು ಕಾಫಿ, ಟೀ ಕುಡಿದರೆ ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ. ಹಾಗಿದ್ದರೆ, ಎಚ್ಚರವಾಗಿರಲು, ಚಳಿಯಲ್ಲಿ ಬೆಚ್ಚಗಿದ್ದು ಕೆಲಸ ಮಾಡಲು ಏನು ಮಾಡಬೇಕು ಅನ್ನುತ್ತೀರಾ? ಮತ್ತೇನೂ ಮಾಡಬೇಡಿ, ಕಾಫಿ, ಟೀ ಬದಲಿಗೆ ಬೇರೆ ಏನೆಲ್ಲಾ ಕುಡಿಯಬಹುದು ಅನ್ನುವುದನ್ನು ತಿಳಿದುಕೊಳ್ಳಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

ಮೊದಲನೆಯದು ನೀರು. ಸಾಕಷ್ಟು ನೀರು ಕುಡಿಯುವುದು ದೇಹದ ಜಡತೆ ನಿವಾರಣೆಗೆ ಅತ್ಯಂತ ಸುಲಭದ ಉಪಾಯ. ಪ್ರತಿ ಅರ್ಧಗಂಟೆಗೊಮ್ಮೆ ನೀರು ಕುಡಿಯಿರಿ. ಇದು ನಿಮ್ಮನ್ನು ಪದೇ ಪದೇ ಕುಳಿತಲ್ಲಿನಿಂದ ಎಬ್ಬಿಸಿ ಟಾಯ್ಲೆಟ್ ಕಡೆ ಹೋಗುವುಂತೆ ಮಾಡುವುದರ ಜೊತೆಗೆ, ಎಚ್ಚರವಾಗಿರಲು ಸಹಾಯ ಮಾಡುತ್ತದೆ.

ನೀರು ಸಾಕು ಬೇರೆ ಏನಾದರೂ ಬೇಕು ಅನ್ನಿಸುತ್ತಿದೆಯೇ? ಬಿಸಿ ನೀರಿಗೆ ಒಂದು ಗ್ರೀನ್ ಟೀ ಬ್ಯಾಗ್ ಹಾಕಿ, ಎರಡು ನಿಮಿಷ ಬಿಟ್ಟು ಕುಡಿಯಿರಿ. ಗ್ರೀನ್ ಟೀ ನಿಮಗೆ ಅತ್ಯಂತ ಕಡಿಮೆ ಪ್ರಮಾಣದ ಕೆಫೀನ್ ನೀಡುತ್ತದೆ, ಆರೋಗ್ಯ ಕಾಪಾಡುತ್ತದೆ ಮತ್ತು ಎಚ್ಚರವಿರಲು ಸಹಾಯ ಮಾಡುತ್ತದೆ. ಕಷಾಯ ಕುಡಿದಂತಾಗುವ ಗ್ರೀನ್ ಟೀಗಿಂತ ಒಂದಿಷ್ಟು ರುಚಿಯಾಗಿರುವುದನ್ನೇನಾದರೂ ಹೇಳಿ ಅಂದ್ರಾ ಹಾಗಿದ್ರೆ, ಹಾಟ್ ಚಾಕೊಲೇಟ್ ಕುಡಿಯಿರಿ. ಇದು ನಿಮ್ಮ ಶಕ್ತಿಯ ಮಟ್ಟ ಹೆಚ್ಚಿಸುತ್ತದೆ. ವಿಟಮಿನ್ ಬಿ 12 ಹೊಂದಿರುವ ಚಾಕೊಲೇಟ್ ಜೀರ್ಣಾಂಗವ್ಯವಸ್ಥೆ ಮತ್ತು ಮೆದುಳನ್ನು ಚುರುಕುಗೊಳಿಸುತ್ತದೆ. ಚಾಕೊಲೇಟ್ ಬೋರಾಯಿತೇ, ಬ್ಲಾಕ್ ಟೀ ಕುಡಿಯಿರಿ, ಇದೂ ಕೂಡ ಮೆದುಳನ್ನು ಉತ್ತೇಜಿಸಿ ನೀವು ಎಚ್ಚರವಾಗಿರಲು ನೆರವಾಗುತ್ತದೆ. ಇದ್ಯಾವುದೂ ಬೇಡವಾದರೆ, ಫ್ರಿಜ್‌ನಿಂದ ಒಂದು ಸೇಬನ್ನು ತೆಗೆದು ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಇದೂ ಕೂಡ, ನಿಮಗೆ ಅಗತ್ಯವಿರುವ ಶಕ್ತಿ ನೀಡುತ್ತದೆ. ಒಟ್ಟಿನಲ್ಲಿ ಡೆಡ್‌ಲೈನ್ ಪಡೆದು ಕೆಲಸ ಮಾಡುವಾಗ ಲೈಫ್ ಲೈನ್ ಹಳಿ ತಪ್ಪದಂತೆ ನೋಡಿಕೊಳ್ಳಿ ಅಷ್ಟೇ.


ಸಂಬಂಧಿತ ಟ್ಯಾಗ್ಗಳು

Beverages Deadline ಆರೋಗ್ಯ ಟಾಯ್ಲೆಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ