ಒಂದೇ ದಿನದಲ್ಲಿ 98 ಶೌಚಾಲಯಗಳ ನಿರ್ಮಾಣ

98 Toilets Built in a day

22-12-2017

ಒಂದು ಪ್ರದೇಶವನ್ನು 24 ಗಂಟೆಗಳೊಳಗೆ ಬಯಲು ಶೌಚದಿಂದ ಮುಕ್ತಗೊಳಿಸಲು ಸಾಧ್ಯನಾ..? ಈ ಪ್ರಶ್ನೆಗೆ, ಉತ್ತರ ಪ್ರದೇಶದಲ್ಲಿನ ಒಂದು ಹಳ್ಳಿಯ ಜನರು ಸಾಧ್ಯ ಎನ್ನುವದಕ್ಕಿಂತ ಶೌಚಾಲಯಗಳನ್ನು ನಿರ್ಮಾಣ ಮಾಡಿ ತೋರಿಸಿದ್ದಾರೆ. ಇದೇ ಡಿಸೆಂಬರ್ ತಿಂಗಳು ದಿನಾಂಕ ಹತ್ತರಂದು ಸುಮಾರು 400 ರಿಂದ 500 ಗ್ರಾಮಸ್ಥರು ಮತ್ತು 200ಕ್ಕೂ ಹೆಚ್ಚು ಸರ್ಕಾರಿ ನೌಕರರು ಒಟ್ಟಿಗೆ ಸೇರಿಕೊಂಡು ಒಂದೇ ದಿನದಲ್ಲಿ 98 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಉತ್ತರ ಪ್ರದೇಶದ ಇತಾ ಜಿಲ್ಲೆಯ ಲಾಹ್ರಾ ನಾಗ್ಲಾ ಸಕೋಲಿ ಎನ್ನುವ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮವನ್ನಾಗಿಸಿದ್ದಾರೆ. ಸುಮಾರು 45 ಕೋಟಿ ವೆಚ್ಚದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಪೂರ್ಣಗೊಂಡ ಈ ಕಾರ್ಯ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಬಹುಶ: ಇದೇ ರೀತಿ ಜನ ಮತ್ತು ಸರ್ಕಾರ ಒಂದಾಗಿ ಕೆಲಸ ಮಾಡಿದರೆ ನಮ್ಮ ರಾಜ್ಯವೂ ಬಯಲು ಶೌಚ ಮುಕ್ತ ರಾಜ್ಯವಾಗಬಹುದು ಎಂಬುದರಲ್ಲಿ ಅನುಮಾನವಿಲ್ಲ.


ಸಂಬಂಧಿತ ಟ್ಯಾಗ್ಗಳು

Toilets open defecation ಬಯಲು ಶೌಚ ಉತ್ತರ ಪ್ರದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ