'ಕಾಂಗ್ರೆಸ್ ಗೆ ಬೈಯ್ಯೋದೆ ಪರಿವರ್ತನಾ ಯಾತ್ರೆ’

JDS yuva conference in belagavi

22-12-2017

ಬೆಳಗಾವಿ: ಬೆಳಗಾವಿ ಜಿಲ್ಲಾ ಜೆಡಿಎಸ್ ಯುವ ಘಟಕದ ಸಮಾವೇಶದಲ್ಲಿ ಮಧು ಬಂಗಾರಪ್ಪ ತಮ್ಮ ಭಾಷಣದಲ್ಲಿ, ಕರ್ನಾಟಕಕ್ಕೆ ಜೆಡಿಎಸ್ ಅವಶ್ಯಕತೆ ಇದೆ, ಕುಮಾರಣ್ಣ ಮುಖ್ಯಮಂತ್ರಿ ಆಗಲೇಬೇಕು ಎಂದಿದ್ದಾರೆ.

ಯೋಗಿ ಆದಿತ್ಯನಾಥ ಬಂದು ಬಿಜೆಪಿಯವರಿಗೆ ಪಾಠ ಹೇಳಿ ಕೊಡುತ್ತಾರೆ ಅಂದರೆ ಇಲ್ಲಿನ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು, ಜಾತಿ ಜಾತಿಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಯೋಗಿ ಆದಿತ್ಯನಾಥ ಅವರನ್ನು ಕರಸಿರೋದೆ ಇಂತ ವಿಷ ಬಿಜವನ್ನು ಬಿತ್ತೋಕೆ ಎಂದು ಆರೋಪಿಸಿದ್ದಾರೆ. ಮಹಾದಾಯಿ ವಿಚಾರಕ್ಕೆ ಯಡಿಯೂರಪ್ಪ ಇವಾಗ ಪತ್ರ ಬರೆದಿದ್ದಾರೆ, ಆದರೆ ಇಂತ ಪತ್ರವನ್ನು 2012ರಲ್ಲಿಯೇ ಕುಮಾರಸ್ವಾಮಿ ಅವರು ಬರೆದಿದ್ದರು ಎಂದು ತಿಳಿಸಿದರು. 

ನಾಚಿಕೆ ಮಾನ ಮಾರ್ಯಾದೆ ಇಲ್ಲದೆ ಇರೋ ಅವರು ಬೆಜೆಪಿ ಅವರು,‌ ಬಿಜೆಪಿ ಅವರು ಪರಿವರ್ತನಾ ಯಾತ್ರೆ ಯಾಕೆ ಮಾಡ್ತಾ ಇದ್ದಾರೆ ಅಂದರೆ, ಕಾಂಗ್ರೆಸ್ ನವರನ್ನು ಬೈಯ್ಯೋಕೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಅವರು ಯಾತ್ರೆ ಮಾಡಲಿಲ್ಲಾ ಮನೆ ಮನೆಗೆ ಹೋಗಿ ಅವರ ಕಷ್ಟ ಅರ್ಥ ಮಾಡಿಕೊಂಡು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

Madhu Bangarappa Yogi adityanand ಸಮಾವೇಶ ಭಾಷಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ