ವ್ಯಕ್ತಿ ಮೇಲೆ ಹರಿದ ವಾಹನ

Accident one Died

22-12-2017

ಬೆಂಗಳೂರು: ಸಂಬಂಧಿಕರ ಮನೆಗೆಂದು ಬಂದಿದ್ದ ವ್ಯಕ್ತಿಯೊಬ್ಬರು, ರಸ್ತೆ ದಾಟುವಾಗ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆಯು, ನಗರದ ಬ್ಯಾಟರಾಯನಪುರ ಮೈಸೂರು ರಸ್ತೆಯಲ್ಲಿ ನಡೆದಿದೆ. ಚೆನ್ನಪಟ್ಟಣದ ಲಿಂಗಯ್ಯ (56)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಮೈಸೂರು ರಸ್ತೆಯಲ್ಲಿದ್ದ ಸಂಬಂಧಿಕರ ಮನೆಗೆ ನಿನ್ನೆ ರಾತ್ರಿ ಬಂದಿದ್ದ ಲಿಂಗಯ್ಯ ಅವರು ಮುಂಜಾನೆ 3ರ ವೇಳೆ ಊರಿಗೆ ಹೋಗಲು ಮೈಸೂರು ರಸ್ತೆಯ ಫೆದರ್ ಲೈಟ್ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ವಾಹನವೊಂದು ಡಿಕ್ಕಿಹೊಡೆದು ಆತನ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿದ್ದರು, ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ, ಆದರೆ ಮಾರ್ಗ ಮಧ್ಯೆಯೇ ಲಿಂಗಯ್ಯ ಮೃತಪಟ್ಟಿದ್ದಾರೆ. ಬ್ಯಾಟರಾಯನಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Traffic police ಮೈಸೂರು ದುರ್ಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ