ತೆರಿಗೆಯವರಿಂದ ಎಸ್ಕೇಪ್ ಆಗ್ತೀರಾ..?

you can

22-12-2017 427

ನಿಮಗೆ ತೆರಿಗೆ ಕಟ್ಟಬೇಕಾದಷ್ಟು ಆದಾಯ ಇದೆಯೇ? ಯಾವುದಾದರೂ ಕಾರಣದಿಂದ ಆದಾಯ ತೆರಿಗೆ ಇಲಾಖೆಯವರು ನಿಮಗೆ ಕಳಿಸಿದ ನೋಟಿಸ್‌ ಸ್ವೀಕರಿಸಿದೆ ತಪ್ಪಿಸಿಕೊಂಡಿದ್ದೀರಾ? ತಪ್ಪು ವಿಳಾಸ ಕೊಡುವ ಮೂಲಕ ಅಥವ ಮನೆಯನ್ನೇ ಬೇರೆ ಕಡೆಗೆ ಬದಲಾಯಿಸುವ ಮೂಲಕ, ತೆರಿಗೆ ಇಲಾಖೆ ನೋಟಿಸ್ ಪಡೆಯದೆ ಯಾಮಾರಿಸಿದ್ದೀರಾ? ಹಾಗಿದ್ರೆ ಇನ್ನು ಮುಂದೆ ಇದೆಲ್ಲ ಯಾವುದೂ ನಡೆಯೋದಿಲ್ಲ.

ನೀವು ಆದಾಯ ತೆರಿಗೆ ಇಲಾಖೆಯವರ ಕಣ್ಣಿಗೆ ಮಣ್ಣೆರಚುವ ಯಾವುದೇ ಪ್ರಯತ್ನವನ್ನೂ ಮಾಡದಿರುವುದೇ ಒಳ್ಳೆಯದು. ಏಕೆಂದರೆ, ನೀವು ಕೊಟ್ಟಿರುವ ವಿಳಾಸಕ್ಕೆ ಕಳಿಸಿದ ನೋಟಿಸ್ ಅನ್ನು, ಅಲ್ಲಿ ಯಾರೂ ಸ್ವೀಕರಿಸದಿದ್ದರೂ ಕೂಡ, ನಿಮ್ಮ ಅಸಲಿ ವಾಸ ಸ್ಥಾನ ಪತ್ತೆ ಹಚ್ಚಿ ನೋಟಿಸ್ ತಲುಪಿಸುವ ದಾರಿಯನ್ನು ತೆರಿಗೆ ಇಲಾಖೆಯವರು ಕಂಡುಕೊಂಡಿದ್ದಾರೆ.

ಇದಕ್ಕಾಗಿ ಹೊಸ ನಿಯಮ ರೂಪಿಸಿರುವ ಆದಾಯ ತೆರಿಗೆ ಇಲಾಖೆಯವರು, ನಿಮ್ಮ ನಿಜವಾದ ಅಡ್ರೆಸ್ ಕಂಡು ಹಿಡಿಯಲು ನಿಮ್ಮ ಬ್ಯಾಂಕಿಗೆ ನೀಡಿರುವ ವಿಳಾಸ, ಇನ್ಶುರೆನ್ಸ್ ಕಂಪನಿ, ಪೋಸ್ಟ್ ಆಫೀಸ್, ಸರ್ಕಾರದ ದಾಖಲೆಗಳಲ್ಲಿರುವ ವಿಳಾಸ, ಬಿಬಿಎಂಪಿ ಅಥವ ಮುನ್ಸಿಪಾಲಿಟಿಗೆ ನೀಡಿರುವ ವಿಳಾಸ ಇತ್ಯಾದಿ ಹಲವು ಕಡೆ ನೀಡಿರುವ ವಿಳಾಸವನ್ನು ಪಡೆದು ನಿಮ್ಮನ್ನು ಪತ್ತೆ ಹಚ್ಚುತ್ತಾರೆ. ನೋಟಿಸ್, ಕಚೇರಿಗೆ ಬರಲು ಬುಲಾವ್ ಅಥವ ಮತ್ಯಾವುದೇ ರೀತಿಯ ಸೂಚನೆಗಳಿದ್ದರೂ ಜಾರಿ ಮಾಡುತ್ತಾರೆ. ಹೀಗಾಗಿ, ಯಾವುದೇ ರೀತಿಯ ನೋಟಿಸ್ ತಪ್ಪಿಸಿಕೊಂಡು ಓಡಾಡುವುದನ್ನು ಬಿಟ್ಟು, ಅದನ್ನು ಸ್ವೀಕರಿಸಿ, ಸೂಕ್ತ  ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದೇ ಒಳ್ಳೆಯ ಕೆಲಸ.ಸಂಬಂಧಿತ ಟ್ಯಾಗ್ಗಳು

Income Tax insurance ತೆರಿಗೆ ಇಲಾಖೆ ಬಿಬಿಎಂಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ