3 ಎಮ್ಮೆ ಕರುಗಳನ್ನು ಕೊಂದ ಚಿರತೆ

Leopard attack: 3 buffaloes dead

22-12-2017

ಕಾರವಾರ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 3 ಎಮ್ಮೆ ಕರುಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಅಮದಳ್ಳಿಯ ಟೋಲ್‌ನಾಕಾದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಕೃಷ್ಣ ಮಹಾದೇವ ಚಿಂಚಣಕರವರ ಮನೆಯ ಹತ್ತಿರದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಈ ಎಮ್ಮೆ ಕರುಗಳ ಮೇಲೆ ರಾತ್ರಿಯ ವೇಳೆ ಚಿರತೆ ದಾಳಿ ನಡೆಸಿದೆ. ಒಂದು ಎಮ್ಮೆ ಕರುವನ್ನು ಅರ್ಧಂಬರ್ಧ ತಿಂದು ಹಾಕಿದ್ದು, ಇನ್ನೆರಡನ್ನು ಸಾಯಿಸಿ ಹಾಗೆ ಬಿಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಕಾರ್ಯ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಪದೇ ಪದೇ ಚಿರತೆ ದಾಳಿ ನಡೆಯುತ್ತಿದ್ದು ಸ್ಥಳೀಯರು ಆತಂಕ ಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

cheetah attack Karwara ಎಮ್ಮೆ ಕರು ಚಿರತೆ ದಾಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ