ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ

Kannada News

14-04-2017

ಶಿರಸಿ : ಯಲ್ಲಾಪುರ ಪಟ್ಟಣದ ಹೋಟೆಲಿನಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ. ಯಲ್ಲಾಪುರದ ಕೆ.ಎಸ್.ಆರ್.ಟಿ.ಸಿ ಡಿಪೊ ಬಳಿಯ ಹೋಟೆಲಿನಲ್ಲಿ ಘಟನೆ. ಸಂಜೀವ ದಾಮೋದರ ನಾಯ್ಕ ಹಾಗೂ ಶಂಕರ ಬಸಲಿಂಗಪ್ಪ ಎರಿಹಾಳ ಬಂಧಿತರು. ಡಿಸಿಐಬಿ ಇನ್ಸ್ಪೆಕ್ಟರ್ ಎನ್.ಆಂಜನೇಯ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಬಂಧಿತರಿಂದ ಗಾಂಜಾದ ಒಣ ಎಲೆ, ಪುಡಿ, ಬೀಜ ಸೇರಿ 25,000 ರೂ ಮೌಲ್ಯದ ಗಾಂಜಾ ಹಾಗೂ ಗಾಂಜಾ ಮಾರಿದ 1500 ರೂ ನಗದು ವಶಪಡಿಸಿಕೊಂಡಿದ್ದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ