ವಿಜಯಪುರದಲ್ಲಿ ಬೀಡುಬಿಟ್ಟ ಸಿಐಡಿ ತಂಡ

Rape case CID started investigation

22-12-2017 318

ವಿಜಯಪುರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ, ಘಟನೆ ತನಿಖೆಗಾಗಿ, ಸಿಐಡಿ ಅಧಿಕಾರಿಗಳು ವಿಜಯಪುರದಲ್ಲೇ ಬೀಡು ಬಿಟ್ಟಿದ್ದಾರೆ. ಕಳೆದ ಡಿಸೆಂಬರ್ 19 ರಂದು ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಬಾಲಕಿಯನ್ನು ಎಳೆದೊಯ್ದು, ಅತ್ಯಾಚಾರ ಎಸಗಿ ಕಲೆ ಮಾಡಿದ್ದರು. ಇನ್ನು ದುಷ್ಕೃತ್ಯ ಖಂಡಿಸಿ ಪೋಷಕರು ವಿವಿಧ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಡಿಸೆಂಬರ್ 20ರಂದು ಸಿಎಂ ಸಿದ್ದರಾಮಯ್ಯ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಸಿಎಂ ಆದೇಶದಂತೆ ನಿನ್ನೆ ತಡರಾತ್ರಿ ನಗರಕ್ಕೆ ಬಂದಿಳಿದಿದ್ದಾರೆ. 18 ರಿಂದ 20 ಅಧಿಕಾರಿಗಳ ತಂಡ ಇಂದು ಬೆಳಿಗ್ಗೆ ಎಸ್ಪಿ ಕಚೇರಿಗೆ ಆಗಮಿಸಿ, ಎಸ್ಪಿ ಕುಲದೀಪಕುಮಾರ್ ಜೈನ್ ಜೊತೆಗೆ ಘಟನೆ ಕುರಿತು ಚರ್ಚೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.ಸಂಬಂಧಿತ ಟ್ಯಾಗ್ಗಳು

CID Rape ಪ್ರಕರಣ ಎಸ್ಪಿ ಕಚೇರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ