ಗುಜರಾತ್: ‘ಕಾಂಗ್ರೆಸ್ ಗೆ ನೈತಿಕ ಗೆಲುವು’

22-12-2017 377
ಮಂಡ್ಯ: ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕದಿಂದ ಕಾಂಗ್ರೆಸ್ ಗೆ ಬಲ ಬಂದಿದೆ ಎಂದು, ಜೆಡಿಎಸ್ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ. ಮದ್ದೂರಿನಲ್ಲಿಂದು ಮಾತನಾಡಿದ ಅವರು, ಗುಜರಾತ್ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಆಗದೇ ಇದ್ದರೆ ಕಾಂಗ್ರೆಸ್ ಗೆಲುವು ಖಚಿತ ಎಂದು ಹೇಳಿದ್ದಾರೆ. ಹೊಸ ಎಐಸಿಸಿ ಅಧ್ಯಕ್ಷರಿಗೆ ಜನ ಬೆಂಬಲ ಸಿಗುತ್ತಿದೆ ಎಂದ ಅವರು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ 40 ಬಾರಿ ಪ್ರಚಾರ ಸಭೆ ನಡೆಸಿದ್ದು, ಅಧಿಕಾರ ದುರ್ಬಳಕೆ ಮೂಲಕ ಅಧಿಕಾರ ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ಗುಜರಾತ್ ಗೆಲುವು ಬಿಜೆಪಿಗೆ ನೈತಿಕ ಗೆಲವು ಅಲ್ಲ, ಅದು ಕಾಂಗ್ರೆಸ್ ನ ನೈತಿಕ ಗೆಲುವು ಎಂದಿದ್ದಾರೆ.
ಒಂದು ಕಮೆಂಟನ್ನು ಹಾಕಿ