ಅಪ್ರಾಪ್ತರ ಮದುವೆ ಯುವಕ ಜೈಲುಪಾಲು

case booked against a boy under pocso act

22-12-2017

ಮಂಡ್ಯ: ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಮದುದೆಯಾಗಿದ್ದ ಬಾಲಕೊನೊಬ್ಬ ಜೈಲುಪಾಲಾಗಿದ್ದಾನೆ. ಘಟನೆಯು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯದ ನಾಗಮಂಗಲ ತಾಲ್ಲೂಕಿನ ಹೊನ್ನದೇವಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಮತ್ತು ಕೆ.ಆರ್.ನಗರದ ತಿಪ್ಪೂರು ಗ್ರಾಮದ ಅಪ್ರಾಪ್ತ ಬಾಲಕ ನಡುವೆ ಪರಸ್ಪರ ಪ್ರೇಮವಾಗಿತ್ತು. ನಂತರದಲ್ಲಿ ಇಬ್ಬರು ಮನೆ ಬಿಟ್ಟು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಮದುವೆ ಮಾಡಿಕೊಂಡಿದ್ದರು. ಹೊನ್ನದೇವಿಹಳ್ಳಿ ಗ್ರಾಮದಲ್ಲಿ ಈ ಬಗ್ಗೆ ಹುಡುಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಅಪ್ರಾಪ್ತ ಪ್ರೇಮಿಗಳನ್ನು ವಶಕ್ಕೆ ಪಡೆದು, ಬಾಲಕನ ವಿರುದ್ಧ ಪೋಸ್ಕೋ ಕಾಯಿದೆ ಅಡಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ನಾಗಮಂಗಲದ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Marriage POCSO Act ಅಪ್ರಾಪ್ತ ವಿದ್ಯಾರ್ಥಿನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ