ಮಾರಕಾಸ್ತ್ರಗಳಿಂದ ಇರಿದು ವ್ಯಕ್ತಿ ಕೊಲೆ

A Man killed by Rowdy gang

22-12-2017

ಬೆಂಗಳೂರು: ಬೆಂಗಳೂರಿನಲ್ಲಿ ಮಚ್ಚು ಲಾಂಗುಗಳಿಗೆ ಮತ್ತೊಬ್ಬ ಯುವಕ ಬಲಿಯಾಗಿದ್ದಾನೆ. ರಿಜ್ವಾನ್(23) ಕೊಲೆಯಾದ ದುರ್ದೈವಿ. ಡಿ.ಜೆ.ಹಳ್ಳಿಯ ನೂರ್-ಮಸೀದಿ ಬಳಿ ನಿನ್ನೆ ರಾತ್ರಿ 12ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಡ್ರ್ಯಾಗರ್ ನಿಂದ ಇರಿದು ಕೊಲೆಗೈದ ಮೂರು ಜನ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಚೋಟಾ ಶಾಹೀದ್, ಚೆನ್ನೈನ ಶಾಹೀದ್ ಮತ್ತೊಬ್ಬ ವ್ಯಕ್ತಿ ಜೊತೆ ಸೇರಿ ಈ ದುಷ್ಕೃತ್ಯ ಎಸಗಿದ್ದಾರೆ.  ಮನೆಯೊಳಗಿದ್ದ ರಿಜ್ವಾನ್ ನನ್ನು ಹೊರಗೆಳೆದು, ವಿನಾಕಾರಣ ಜಗಳ ತೆಗೆದು ದಾಳಿ ಮಾಡಿದ್ದಾರೆ. ಇನ್ನು ಘಟನೆಯಿಂದ ಗಂಭೀರವಾಗಿ ಗಾಯಗೊಂಡ ರಿಜ್ವಾನ್ ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿದ ಡಿ.ಜೆ.ಹಳ್ಳಿ ಪೊಲೀಸರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy gang Murder ಮಚ್ಚು-ಲಾಂಗು ಡ್ರ್ಯಾಗರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ