ಅಂಬರೀಶ್ ಯೂಟರ್ನ್

Kannada News

14-04-2017

ಮಂಡ್ಯ:- ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆ. ಎರಡೂ ಕ್ಷೇತ್ರಗಳ ಗೆಲುವು ಸಂತಸ ತಂದಿದೆ. ಇನ್ನೂ ಒಂದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತೆ. ಅಭಿವೃದ್ಧಿ ಆಗುತ್ತೆ ಅಂತಾ ಜನ ಗೆಲ್ಲಿಸಿದ್ದಾರೆ. ಇದೇನೂ ಪ್ರತಿಷ್ಟೆ ಅಲ್ಲಾ. ನಾನ್ಯಾಕೆ ಪಕ್ಷ ಬಿಡಬೇಕು? ಕೇಂದ್ರದಲ್ಲಿ ಸೆಂಟ್ರಲ್ ಮಿನಿಸ್ಟರ್, ರಾಜ್ಯದಲ್ಲಿ ಕ್ಯಾಬಿನೆಟ್ ಮಿನಿಷ್ಟರೆಲ್ಲಾ ಮಾಡಿದ್ದಾರೆ ಯಾಕೆ ಬಿಡಲಿ? ನಾನೇನು ಮುಖ್ಯಮಂತ್ರಿ ಆಗ್ಬೇಕಿತ್ತಾ? ಏನಿಲ್ಲ.  ನನಗೇನೂ ಅಸಮಾಧಾನವಿಲ್ಲ ಬಿಡಿ. ನಾನೇನೂ ಆಸೆ ಪಡಲ್ಲ. ಜನ ನಮ್ಮನ್ನ ಮುಖ್ಯಮಂತ್ರಿಯಷ್ಟೇ ಆಸೆಪಟ್ಟವರೇ. ಇನ್ನೇನು ಬೇಕು?
ಪ್ರೀತಿ, ವಿಶ್ವಾಸ, ಅಭಿಮಾನ ಸಂಪಾದನೆ ಮಾಡಿದ್ದೀವಿ. ಅದಕ್ಕಿಂತ ಇನ್ನೇನು ಬೇಕು? ಮುಖ್ಯಮಂತ್ರಿ ಮೇಲೆ ಮುನಿಸೇ ಇಲ್ಲ. ಬೇರೆಯವರಿಗೂ ಆಸೆ ಇರುತ್ತಲ್ವಾ? ನನಗೆ ಮೂರೂವರೆ ವರ್ಷ ಮಾಡಿದ್ರು. ಬೇರೆಯವರಿಗೆ ಒಂದೂವರೆ ವರ್ಷ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಅವರು ಗೆದ್ದು ಬಂದಿರ್ತಾರೆ. ಮುಂದಿನ ಚುನಾವಣೆ ಸ್ಪರ್ಧೆ ವಿಚಾರ ಭವಿಷ್ಯ ಹೇಳೋಕೆ ಆಗಲ್ಲ. ಮುಂದೆ ನೋಡೋಣ ಎಂದು ಕಾಂಗ್ರೆಸ್ ಪಕ್ಷದ ಪರ ಅಂಬಿ ಬ್ಯಾಟಿಂಗ್ ಮಾಡಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ