ಪುಡಿ ರೌಡಿಗಳ ದಾಂಧಲೆ: ಬೇಕರಿ ಧ್ವಂಸ

2 bakery destroyed by rowdy

21-12-2017

ಬೆಂಗಳೂರು: ನಗರದ ಹೊರವಲಯದ ಆನೇಕಲ್ ಬಳಿಯ ಕಲ್ಕರೆಯಲ್ಲಿ ನಿನ್ನೆ ರಾತ್ರಿ ದಾಂಧಲೆ ನಡೆಸಿರುವ ಪುಡಿ ರೌಡಿಗಳು ಎರಡು ಬೇಕರಿಗಳನ್ನು ಧ್ವಂಸಗೊಳಿಸಿದ್ದಾರೆ. ಹೆಲ್ಮೆಟ್ ಹಾಕಿಕೊಂಡು ರಾತ್ರಿ 10ರ ವೇಳೆ ಬಂದ ಪುಡಿ ರೌಡಿಗಳು ಬೇಕರಿ ಮಾಲಿಕರಿಗೆ ಥಳಿಸಿ ಅಂಗಡಿಯನ್ನು ಧ್ವಂಸ ಗೊಳಿಸಿದ್ದು ರೌಡಿಗಳ ದಾಂಧಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

rowdy Anekal ಘಟನೆ ಪುಡಿ ರೌಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ