ಮುಂಬೈ ಯುವಕ ಬೆಂಗಳೂರಲ್ಲಿ ಆತ್ಮಹತ್ಯೆ

Mumbai

21-12-2017

ಬೆಂಗಳೂರು: ಸಂಗೀತ ಕಲಿಯಲು ಮುಂಬೈನಿಂದ ಬಂದಿದ್ದ ಯುವಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಗರದ ವಿಲ್ಸನ್ ಗಾರ್ಡನ್‍ ನ ಶಾಂತಿ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಶಾಂತಿ ನಗರದ ಚೌಡಪ್ಪ ರಸ್ತೆಯಲ್ಲಿ ವಾಸಿಸುತ್ತಿದ್ದ ಅಂಕಿತ್ ದುಬೆ (22)ಎಂದು ಗರುತಿಸಲಾಗಿದೆ. ಸಂಗೀತ ಕಲಿಯಲು ಮುಂಬೈನಿಂದ ಒಂದು ತಿಂಗಳ ಹಿಂದಷ್ಟೆ ನಗರಕ್ಕೆ ಬಂದಿದ್ದ ದುಬೆ, ಚೌಡಪ್ಪ ರಸ್ತೆಯ ಮಹೇಶ್ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದರು. ಸಂಗೀತ ಕಲಿಯಲು ಹತ್ತಿರದ ಶಾಲೆಗೆ ಸಂಗೀತ ಕಲಿಯಲು ಹೋಗಿ ಬರುತ್ತಿದ್ದ ದುಬೆ, ಎರಡು ದಿನಗಳಿಂದ ಹೊರಗೆ ಬಂದಿರಲಿಲ್ಲ.

ಮುಂಬೈನ ದುಬೆ ಅವರ ಸಹೋದರ ನಿನ್ನೆ ಮೊಬೈಲ್‍ಗೆ ಕರೆ ಮಾಡಿದ್ದು, ಸ್ವೀಕರಿಸದಿದ್ದರಿಂದ ಆತಂಕಗೊಂಡು ಮನೆ ಮಾಲೀಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಮಾಲೀಕ ಮಹೇಶ್ ಅವರು ದುಬೆ ಬಾಡಿಗೆಗಿದ್ದ ಕೊಠಡಿಯ ಬಾಗಿಲು ಬಡಿದು ನೋಡಿದ್ದಾರೆ. ಎಷ್ಟು ಬಾಗಿಲು ಬಡಿದರೂ ತೆಗೆಯದಿದ್ದರಿಂದ ಕಿಟಕಿ ಬಾಗಿಲು ತೆರೆದು ನೋಡಿದಾಗ ದುಬೆ ವೇಲ್‍ನಿಂದ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿರುವ ವಿಲ್ಸನ್ ಗಾರ್ಡನ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ