ಆಪರೇಷನ್ ಉಬ್ರಾಣಿ ಸಕ್ಸಸ್

Operation Ubhrani Success...!

21-12-2017

ದಾವಣಗೆರೆ: ಚಿತ್ರದುರ್ಗ-ದಾವಣಗೆರೆ ಅವಳಿ ಜಿಲ್ಲೆಗಳಲ್ಲಿ ಮೂವರನ್ನ ಬಲಿ ಪಡೆದು, 16 ಕ್ಕೂ ಹೆಚ್ಚು ಮಂದಿಗೆ ಗಾಯಗೊಳಿಸಿದ್ದ ಪುಂಡಾನೆಯನ್ನು ಐದು ದಿನಗಳ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಚಿತ್ರದುರ್ಗ ಮತ್ತು ದಾವಣಗೆರೆ ನುಗ್ಗಿದ್ದ ಕಾಡಾಗೆ ಏಕಾಏಕಿ ಜನರ ಮೇಲೆ ಎರಗಿ,  ಮೂವರನ್ನು ಬಲಿ ಪಡೆದಿತ್ತು ಅದಲ್ಲದೇ 16 ಮಂದಿ ಗಂಭೀರ ಗಾಯಗಳಿಂದ ಪ್ರಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ಕಾಡನೆಯ ಹಾವಳಿ ಹೆಚ್ಚಾಗುತ್ತಿದ್ದಂತೆ, ಅರಣ್ಯ ಸಿಬ್ಬಂದಿ ಆಪರೇಷನ್ ಉಬ್ರಾಣಿ ಆರಂಭಿಸಿದ್ದರು. ಅರಣ್ಯ ಸಿಬ್ಬಂದಿ ಕಾರ್ಯಾರಣೆಗೆ ಇಳಿಯುತ್ತಿದ್ದಂತೆ ಮತ್ತಷ್ಟು ಕೀಟಲೆ ನೀಡಲು ಆರಂಭಿಸಿ ಆನೆ ಸೆರೆ ಸಿಗದೆ ಸಾರ್ವಜನಿಕರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಇನ್ನು ಐದು ದಿನಗಳ ನಂತರ ದಾವಣಗೆರೆ ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ರಾಜ್ಯ ಅರಣ್ಯ ಪ್ರದೇಶದಲ್ಲಿ ಪುಂಡಾನೆ ಸೆರೆ ಸಿಕ್ಕದೆ. ಏಳು ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು ಸೆರೆ ಹಿಡಿದಿದ್ದಾರೆ. ಮೂವರು ವೈದ್ಯರು, 60ಕ್ಕೂ ಹೆಚ್ಚು ಸಿಬ್ಬಂದಿಯ ಪರಿಶ್ರಮದಿಂದ ಆಪರೇಷನ್ ಉಬ್ರಾಣಿ ಸಕ್ಸಸ್ ಆಗಿದ್ದು, ಅವಳಿ ಜಿಲ್ಲೆಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Elephant Forest ಪರಿಶ್ರಮ ಸಕ್ಸಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ