'ನಾನು ಯಾವುದೇ ತನಿಖೆಗೂ ಸಿದ್ಧ'21-12-2017

ಮಂಡ್ಯ: ಯಾವುದೇ ಅಸ್ತ್ರವನ್ನು ಬಳಸಿದರೂ ರಾಜ್ಯದಲ್ಲಿ ಜೆಡಿಎಸ್ ಶಕ್ತಿ‌ ಕುಂದಿಸಲು ಸಾಧ್ಯವಿಲ್ಲ ಎಂದು, ಮಂಡ್ಯದ ಜೆಡಿಎಸ್ ಸಂಸದ ಸಿ.ಎಸ್ ಪುಟ್ಟರಾಜು ಹೇಳಿದ್ದಾರೆ. ತನ್ನ ವಿರುದ್ಧ ಅಕ್ರಮ ಗಣಿಗಾರಿಕೆ ತನಿಖೆಗೆ ಆದೇಶ ನೀಡಿದ ರಾಜ್ಯ ಸರ್ಕಾರಕ್ಕೆ ಖಡಕ್ ತಿರುಗೇಟು ನೀಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ, ರಾಜ್ಯ ಸರ್ಕಾರ ಈ ರೀತಿ ಕ್ರಮದಿಂದ ಜೆಡಿಎಸ್ ಮುಗಿಸುತ್ತೇನೆಂದುಕೊಂಡರೆ ಅದು ಭ್ರಮೆ ಅಷ್ಟೆ, ಅಲ್ಲಿ ಜಿ.ಟಿ.ದೇವೇಗೌಡರನ್ನಾಗಲಿ ಇಲ್ಲಿ ನನ್ನನ್ನಾಗಲಿ ಏನೂ ಮಾಡಲು ಆಗಲ್ಲ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

C.S.Puttaraju Mining ಜಿ.ಟಿ.ದೇವೇಗೌಡ ಜೆಡಿಎಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ